ಪ್ರವೀಣ್‌ಗೆ ದಾಖಲೆ ಬೆಳ್ಳಿ | ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ರಷ್ಯಾ ಪದಕ ಶತಕ

Prasthutha|

ಟೋಕಿಯೋ: ಟೋಕಿಯೋ ಪ್ಯಾರಾಲಿಂಪಿಕ್ಸ್‌ನ ಎತ್ತರ ಜಿಗಿತ ಟಿ64 ವಿಭಾಗದಲ್ಲಿ ಭಾರತದ ಪ್ರವೀಣ್ ಕುಮಾರ್ 2.07 ಮೀಟರ್ ಹೈಜಂಪ್‌ ಮಾಡಿ ಬೆಳ್ಳಿ ಗೆದ್ದರು. ಭಾರತದ ಪದಕ ಸಂಖ್ಯೆ ಮೊದಲ ಬಾರಿಗೆ ಡಜನ್ ದಾಟಿ 13 ಕ್ಕೆ ಜಿಗಿತ ಗೊಂಡಿತು.

- Advertisement -

ಇದೇ ಮೊದಲ ಬಾರಿಗೆ ಪ್ಯಾರಾಲಿಂಪಿಕ್ಸ್‌ನಲ್ಲಿ ಪಾಲ್ಗೊಂಡ 18ರ ಪ್ರಾಯದ ಪ್ರವೀಣ್ ಕುಮಾರ್ ಹಾರಿದ ಎತ್ತರ ಹೈಜಂಪ್‌ನಲ್ಲಿ ಏಶಿಯನ್ ಹೊಸ ದಾಖಲೆಯಾಗಿದೆ. ಈ ವಿಭಾಗದಲ್ಲಿ ಬ್ರಿಟನ್ನಿನ ಜೋನಾಥನ್‌ ಬ್ರೂಮ್ 2.10 ಮೀಟರ್ ಎತ್ತರ ಜಿಗಿದು ಸ್ವರ್ಣ ಸಾಧಿಸಿದರು

ಟೋಕಿಯೋ ಪ್ಯಾರಾಲಿಂಪಿಕ್ಸ್ 2020 ಹೆಸರಿನಲ್ಲಿಯೇ ನಡೆಯುತ್ತಿದ್ದು, 84 ದೇಶಗಳು ಈಗಾಗಲೇ ಪದಕ ಪಟ್ಟಿಯಲ್ಲಿ ತಮ್ಮ ಹೆಸರು ಬೆಳಗಿಸಿವೆ.

- Advertisement -

85 ಚಿನ್ನದೊಂದಿಗೆ 184 ಪದಕ ಪಡೆದ ಚೀನಾ, 37 ಬಂಗಾರದ ಸಹಿತ 110 ಪದಕ ಪಡೆದ ಬ್ರಿಟನ್, 34 ಸ್ವರ್ಣದೊಡನೆ 92 ಪದಕ ಹಿಡಿದ ಯುಎಸ್‌ಎ, 34 ಕನಕ ಸಹಿತ 107 ಪದಕ ಒಗ್ಗೂಡಿಸಿರುವ ರಷ್ಯಾ, 24 ಬಂಗಾರ ಸೇರಿ 94 ಪದಕ ಗಳಿಸಿರುವ ಉಕ್ರೇನ್‌, 22 ಸುವರ್ಣದೊಡನೆ 52 ಪದಕ ಹಿಡಿದ ನೆದರ್‌ಲ್ಯಾಂಡ್ಸ್, 21 ಚಿನ್ನದೊಂದಿಗೆ 61 ಪದಕ ಗೆದ್ದ ಬ್ರೆಜಿಲ್‌ಗಳು ಮೆಡಲ್ ಟೇಬಲಿನ ಮೊದಲ ಏಳು ಸ್ಥಾನಗಳಲ್ಲಿ ಇವೆ.

ಆಸ್ಟ್ರೇಲಿಯಾ, ಇಟೆಲಿ, ಅಜರ್‌ಬೈಜಾನ್ ಮುಂದಿನ 10ರವರೆಗಿನ ಸ್ಥಾನಗಳನ್ನು ಕ್ರಮವಾಗಿ ತುಂಬಿವೆ. ಭಾರತವು 2 ಚಿನ್ನ, 6 ಬೆಳ್ಳಿ, 5 ಕಂಚು ಸಹಿತ 13 ಪದಕದೊಂದಿಗೆ ಪದಕ ಪಟ್ಟಿಯ 37ನೇ ಸ್ಥಾನದಲ್ಲಿದೆ.

Join Whatsapp