‘ಭಾರತ್ ಜೋಡೋ’ ಬಳಿಕ ‘ಹಾಥ್ ಸೇ ಹಾಥ್ ಜೋಡೋ’| ಹೊಸ ಅಭಿಯಾನ ಆರಂಭಿಸಲು ಕಾಂಗ್ರೆಸ್ ನಿರ್ಧಾರ

Prasthutha|

ಹೊಸದಿಲ್ಲಿ : ಜನವರಿ 26 ರಿಂದ ಕಾಂಗ್ರೆಸ್ ಪಕ್ಷವು ದೇಶಾದ್ಯಂತ ‘ಹಾಥ್ ಸೇ ಹಾಥ್ ಜೋಡೋ’ ಅಭಿಯಾನ ಆರಂಭಿಸಲಿದ್ದು, ಈ ಅಭಿಯಾನದ ಮೂಲಕ ಬ್ಲಾಕ್, ಪಂಚಾಯತ್ ಮತ್ತು ಬೂತ್ ಮಟ್ಟದಲ್ಲಿ ಜನಸಂಪರ್ಕವನ್ನು ಮಾಡಲಾಗುವುದು ಎಂದು ಕಾಂಗ್ರೆಸ್ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ತಿಳಿಸಿದ್ದಾರೆ.

ಈ ಕುರಿತು ಪತ್ರಕರ್ತರಿಗೆ ಮಾಹಿತಿ ನೀಡಿದ ಅವರು, ‘ಭಾರತ್ ಜೋಡೋ ಯಾತ್ರೆ’ ಮುಗಿದ ನಂತರ ಜನವರಿ 26 ರಿಂದ ದೇಶಾದ್ಯಂತ ಹಾಥ್ ಸೇ ಹಾಥ್ ಜೋಡೋ (ಕೈ ಜೋಡಿಸಿ) ಅಭಿಯಾನವನ್ನು ಪ್ರಾರಂಭಿಸಲಾಗುವುದು. ಈ ಅಭಿಯಾನದ ಮೂಲಕ ಬ್ಲಾಕ್, ಪಂಚಾಯತ್ ಮತ್ತು ಬೂತ್ ಮಟ್ಟದಲ್ಲಿ ಜನರನ್ನು ಸಂಪರ್ಕಿಸಲಾಗುವುದು ಎಂದು ತಿಳಿಸಿದ್ದಾರೆ.

- Advertisement -

ಭಾರತ್ ಜೋಡೋ ಯಾತ್ರೆ ಡಿಸೆಂಬರ್ 24 ರಂದು ದೆಹಲಿ ತಲುಪಲಿದ್ದು, ಜನವರಿ 26 ರೊಳಗೆ ಶ್ರೀನಗರದಲ್ಲಿ ಕೊನೆಗೊಳ್ಳಲಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ತಿಳಿಸಿದ್ದಾರೆ.

- Advertisement -