ಉತ್ತರಪ್ರದೇಶ: ಲೋಕಸಭೆಯ ಒಂದು, ವಿಧಾನಸಭೆಯ ಎರಡು ಕ್ಷೇತ್ರಗಳಿಗೆ ನಾಳೆ ಉಪ ಚುನಾವಣೆ

Prasthutha|

ಲಖನೌ: ಉತ್ತರ ಪ್ರದೇಶದಲ್ಲಿ ಲೋಕಸಭೆಯ ಒಂದು, ವಿಧಾನಸಭೆಯ ಎರಡು ಕ್ಷೇತ್ರಗಳಿಗೆ ಸೋಮವಾರ (ಡಿ.5) ಚುನಾವಣೆ ನಡೆಯಲಿದೆ. ಮತಎಣಿಕೆ ಕಾರ್ಯ ಡಿ.8ರಂದು ನಡೆಯಲಿದೆ.

ಆಡಳಿತರೂಢ ಬಿಜೆಪಿ ಮತ್ತು ಸಮಾಜವಾದಿ ಪಕ್ಷ –ರಾಷ್ಟ್ರೀಯ ಲೋಕದಳ (ಆರ್‌ಜೆಡಿ) ಮೈತ್ರಿಕೂಟದ ನಡುವೆ ನೇರ ಹಣಾಹಣಿ ನಡೆಯುವ ಸೂಚನೆಗಳಿವೆ. ಬಿಎಸ್‌ಪಿ, ಕಾಂಗ್ರೆಸ್‌ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ.

- Advertisement -

ಮೇನ್‌ಪುರಿ ಲೋಕಸಭಾ ಕ್ಷೇತ್ರವು ಸಮಾಜವಾದಿ ಪಕ್ಷದ ಸ್ಥಾಪಕ ಮುಲಾಯಂ ಸಿಂಗ್‌ ಯಾದವ್ ನಿಧನದಿಂದ ತೆರವಾಗಿತ್ತು. ರಾಂಪುರ್ ಸರ್ದಾರ್ ಮತ್ತು ಕಟೌಲಿ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದ ಎಸ್‌ಪಿ ಶಾಸಕ ಅಜಂ ಖಾನ್‌ ಮತ್ತು ಬಿಜೆಪಿ ಶಾಸಕ ವಿಕ್ರಂ ಸಿಂಗ್ ಸೈನಿ ವಿವಿಧ ಪ್ರಕರಣಗಳಲ್ಲಿ ಶಿಕ್ಷೆಗೊಳಪಟ್ಟಿದ್ದರಿಂದ ಅವರ ಸದಸ್ಯತ್ವ ರದ್ದಾಗಿದ್ದು, ಈ ಕ್ಷೇತ್ರಗಳು ತೆರವಾಗಿವೆ.

- Advertisement -