ನವದೆಹಲಿ: ನಾಗಾಲ್ಯಾಂಡ್ ನಿಂದ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ (AFSPA) ಕಾಯ್ದೆಯನ್ನು ಕೇಂದ್ರ ಸರ್ಕಾರ ತಕ್ಷಣ ಹಿಂಪಡೆಯಲಿ ಎಂದು ಸಿಪಿಐ (ಎಂ) ಹಿರಿಯ ನಾಯಕಿ, ಪಾಲಿಟ್ ಬ್ಯೂರೊ ಸದಸ್ಯೆ ವೃಂದಾ ಕಾರಟ್ ಒತ್ತಾಯಿಸಿದ್ದಾರೆ.
ಈ ಕುರಿತು ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಗಾಲ್ಯಾಂಡ್ ನಲ್ಲಿ ಇತ್ತೀಚೆಗೆ ಸೇನೆ ನಡೆಸಿದ ಕ್ರೌರ್ಯವನ್ನು ಕಟುವಾಗಿ ಟೀಕಿಸಿದರು.
ನಾಗಾಲ್ಯಾಂಡ್ ನಲ್ಲಿ ವಿವಾದಾತ್ಮಕ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ (AFSPA) ಕಾಯ್ದೆಯನ್ನು ತೊಡೆದು ಹಾಕುವ ಸಾಧ್ಯತೆಯನ್ನು ಪರಿಶೀಲಿಸಲು ಕೇಂದ್ರವು ಕಾರ್ಯದರ್ಶಿ ಶ್ರೇಣಿಯ ಅಧಿಕಾರಿಯ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಿದೆ.
ಪ್ರಸ್ತುತ ಈ ಸಮಿತಿಯು ತನ್ನ ವರದಿಯನ್ನು 45 ದಿನಗಳಲ್ಲಿ ಸಲ್ಲಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.