ಪಾಶ್ಚಿಮಾತ್ಯ ಶೈಲಿಯಲ್ಲಿ ಬಿಜೆಪಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಮಗಳ ವಿವಾಹ ನಿಶ್ಚಿತಾರ್ಥ !

Prasthutha|

►ದೇಶೀ ಸಂಸ್ಕೃತಿ ಎಂದು ಬೊಬ್ಬಿರಿಯುವ ಸಚಿವೆಯ ಮಗಳ ವಿದೇಶೀ ಶೈಲಿ !

- Advertisement -

ದೆಹಲಿ: ಕೇಂದ್ರ ಸಚಿವೆ ಸ್ಮೃತಿ ಇರಾನಿಯವರ ಪುತ್ರಿ ಶಾನೆಲ್ ಇರಾನಿಯ ವಿವಾಹ ನಿಶ್ಚಿತಾರ್ಥ ನಡೆದಿದೆ. ಇದರ ಫೋಟೋಗಳನ್ನು ಸ್ಮೃತಿ ಇರಾನಿಯವರು ತನ್ನ ಸಾಮಾಜಿಕ ಖಾತೆ  ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು. ಅಚ್ಚರಿಯ ವಿಷಯವೇನೆಂದರೆ ಪ್ರತಿಯೊಂದು ವಿಚಾರಗಳಲ್ಲೂ ದೇಶೀ ಸಂಸ್ಕೃತಿ ಎಂದು ಬೊಬ್ಬಿರಿಯುವ ಬಿಜೆಪಿಯ ಹಲವು ನಾಯಕರಲ್ಲಿ ಒಬ್ಬರಾಗಿರುವ ಸ್ಮೃತಿ ಇರಾನಿಯವರ ಮಗಳ ವಿವಾಹ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ದೇಶಿ ಸಂಸ್ಕೃತಿಯ ಬದಲಿಗೆ ವಿದೇಶೀ ಸಂಸ್ಕೃತಿ ಕಂಡುಬಂದಿದೆ.

ಸ್ಮೃತಿ ಇರಾನಿ ಪೋಸ್ಟ್ ಮಾಡಿರುವ ಫೋಟೊಗಳಲ್ಲಿ ಮಗಳು ಶಾನೆಲ್ ರ ಸಂಭಾವ್ಯ ಪತಿ ಅರ್ಜುನ್ ಭಲ್ಲಾ ಪಾಶ್ಚಿಮಾತ್ಯರ ಶೈಲಿಯಲ್ಲೇ ಮೊಣಕಾಲೂರಿ ವಿವಾಹ ಪ್ರಸ್ತಾಪ ಮಂಡಿಸುವ (Propose) ಮತ್ತು ಉಂಗುರ ತೊಡಿಸುವ ದೃಶ್ಯಗಳಿ

- Advertisement -

ವೆ. ಮಾತ್ರವಲ್ಲ, ಪಕ್ಕದಲ್ಲಿರುವ ಟೇಬಲಿನಲ್ಲಿರುವ ಮಗುಚಿ ಹಾಕಿದ ಶಾಂಪೇನ್ ಗ್ಲಾಸುಗಳು ಕೂಡಾ ಕಂಡು ಬಂದಿದೆ.

ಬಿಜೆಪಿ ನಾಯಕರ ದೇಶೀ ಸಂಸ್ಕೃತಿಯ ಕರೆ ಸ್ವಂತಕ್ಕೆ ಅನ್ವಯವಾಗುವುದಿಲ್ಲವೇ ಎನ್ನುವುದು ಸದ್ಯದ ಪ್ರಶ್ನೆಯಾಗಿದೆ.  ಶಾನೆಲ್ ಅವರು ಸ್ಮೃತಿ ಇರಾನಿಯವರ ಪತಿ ಝುಬಿ ಇರಾನಿಯವರ ಮೊದಲ ಪತ್ನಿಯ ಮಗಳಾಗಿದ್ದಾರೆ.

ನಮ್ಮ ಯೂಟ್ಯೂಬ್ ಚಾನೆಲನ್ನು Subscribe ಮಾಡಿ : Prasthutha News

Join Whatsapp