ಎರಡು ವರ್ಷಗಳ ಬಳಿಕ ಬುರ್ಖಾ ಹಾಕಿದ ಫೋಟೋ ಹಂಚಿಕೊಂಡ ಮಾಜಿ ಬಾಲಿವುಡ್ ನಟಿ ಝೈರಾ ವಾಸಿಮ್!

Prasthutha|

ನವದೆಹಲಿ; ಬಾಲಿವುಡ್ ನ ಮಾಜಿ ನಟಿ ಝೈರಾ ವಾಸಿಮ್ ಎರಡು ವರ್ಷಗಳ ಬಳಿಕ ಇನ್ಸ್ಟಾಗ್ರಾಮ್’ನಲ್ಲಿ  ತಮ್ಮ  ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಬುರ್ಖಾ ಧರಿಸಿ ಸೇತುವೆಯೊಂದರ ಮೇಲೆ ನಡೆದುಕೊಂಡು ಹೋಗುವ ವೇಳೆ ತಮ್ಮ ಮುಖ ಕಾಣದ ರೀತಿಯಲ್ಲಿ ಹಿಂದಿನಿಂದ ತೆಗೆದ ಫೋಟೋವನ್ನು ಝೈರಾ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, “ದಿ ವಾರ್ಮ್ ಅಕ್ಟೋಬರ್ ಸನ್” ಎಂಬುದಾಗಿ ಫೋಟೋ ಕೆಳಗಡೆ ಬರೆದುಕೊಂಡಿದ್ದಾರೆ.

- Advertisement -

ಸೂಪರ್ ಹಿಟ್ ಸಿನಿಮಾ ದಂಗಲ್ ಹಾಗೂ ಸೀಕ್ರೆಟ್ ಸೂಪರ್’ಸ್ಟಾರ್ ಸಿನಿಮಾಗಳಲ್ಲಿ ನಟಿಸಿದ್ದ ಝೈರಾ ವಾಸಿಮ್ 2019ರಲ್ಲಿ ಸಿನಿಮಾ ಕ್ಷೇತ್ರದಿಂದ ದೂರ ಸರಿಯುತ್ತಿರುವುದಾಗಿ ಘೋಷಿಸಿದ್ದರು.

ನನ್ನ ಧಾರ್ಮಿಕ ನಂಬಿಕೆಗಳಿಗೆ ವಿರುದ್ಧವಾಗಿ ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡುವುದನ್ನು ತಾನು ಇಷ್ಟಪಡುವುದಿಲ್ಲ ಎಂದು ಝೈರಾ ಹೇಳಿದ್ದರು. ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಫೋಟೋವನ್ನು ಯಾರೂ ಕೂಡ ಬಳಸಬಾರದು ಎಂದು ಮನವಿಯನ್ನು ಮಾಡಿದ್ದರು. ತಾನು ಜೀವನದ ಹೊಸ ಅಧ್ಯಾಯವೊಂದನ್ನು ಪ್ರಾರಂಭಿಸುತ್ತಿರುವುದಾಗಿ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು.



Join Whatsapp