ವಾಟ್ಸಪ್ಪನ್ನು ಅನ್ ಇನ್ಸ್ಟಾಲ್ ಮಾಡಿ ಸಮಸ್ಯೆ ಸರಿಪಡಿಸಬಹುದೆಂದ ಟೆಲಿಗ್ರಾಂ !

Prasthutha|

ನಿನ್ನೆಯಷ್ಟೇ ವಾಟ್ಸಪ್ , ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂ ತಾಣಗಳ ಸರ್ವರ್ ಡೌನ್ ಆದ ಕಾರಣ ಸುಮಾರು ಏಳು ತಾಸುಗಳ ಕಾಲ ಬಳಕೆದಾರರಿಗೆ ಈ ತಾಣಗಳನ್ನು ಬಳಸಲು ಸಾಧ್ಯವಿರಲಿಲ್ಲ.  ಇದರ ಮಧ್ಯೆಯೇ ಇತ್ತೀಚೆಗೆ ಟ್ವಿಟ್ಟರಿನಲ್ಲಿ ಎರಡು ವೈವಿಧ್ಯಮಯ ಅಂತರ್ಜಾಲ ತಾಣಗಳ ಕುರಿತು ಸ್ವಾರಸ್ಯಕರ ಚರ್ಚೆಗಳು ನಡೆದಿರುವುದು ಬಹಿರಂಗವಾಗಿದೆ.

- Advertisement -

ಟ್ವಿಟ್ಟರ್ ತಾಣದಲ್ಲಿ ಟೆಲಿಗ್ರಾಂನ ಅಧಿಕೃತ ಖಾತೆಯು ತನ್ನ ಬಳಕೆದಾರರು ತಪ್ಪಾಗಿ ಒಂದು ಸಂದೇಶವನ್ನುಕಳುಹಿಸಿದರೆ ಅದನ್ನು ಎರಡು ಕಡೆಯ ಬಳಕೆದಾರರಿಂದ ಡಿಲೀಟ್   ಮಾಡಬಹುದು ಎಂದು ಟ್ವೀಟ್ ಮಾಡಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಬಳಕೆದಾರರೊಬ್ಬರು ವಾಟ್ಸಪ್ಪಿನಲ್ಲಿ ಅಳು ಎಂದು ಅಳುವ ಇಮೋಜಿ ಒಂದನ್ನು ಟ್ವೀಟ್ ಮಾಡಿದರು. ಇದಕ್ಕೆ ಉತ್ತರಿಸಿದ್ದ ಟೆಲಿಗ್ರಾಂ ಅಧಿಕೃತ ಖಾತೆಯು ತಮಗೆ ವಾಟ್ಸಪ್ಪನ್ನು ತಮ್ಮ ಮೊಬೈಲಿನಿಂದ ಅನ್ ಇನ್ಸ್ಟಾಲ್ ಮಾಡುವುದರ ಮೂಲಕ  ಈ ಸಮಸ್ಯೆಯನ್ನು ಪರಿಹರಿಸಬಹುದು ಎಂದು ಟ್ವೀಟ್ ಮಾಡಿ ಸ್ವಾರಸ್ಯಕರ ಚರ್ಚೆಯೊಂದಕ್ಕೆ ನಾಂದಿ ಹಾಡಿತ್ತು.

ತನ್ನ ಬದ್ಧ ಪ್ರತಿಸ್ಪರ್ಧಿಯಾಗಿರುವ ವಾಟ್ಸಪ್ ಬಗ್ಗೆ ಟೆಲಿಗ್ರಾಂ ಈ ರೀತಿ ಬಹಿರಂಗವಾಗಿ ಕಾಲೆಳೆಯುವ ಟ್ವೀಟ್ ಗೆ ಮುನ್ನುಡಿ ಬರೆದಿದ್ದು, ಟ್ವಿಟ್ಟರ್ ಬಳಕೆದಾರರಿಗೆ ಪುಕ್ಕಟೆ ಮನರಂಜನೆ ನೀಡಿತ್ತು.

- Advertisement -



Join Whatsapp