ಚಿತ್ರ ನಟಿ ಸಂಜನಾ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿದ್ದಾರೆಯೇ ? ದಾಖಲೆಗಳೇನು ಹೇಳುತ್ತದೆ

Prasthutha|

ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿರುವ ಚಿತ್ರನಟಿ ಸಂಜನಾ ಗಾಲ್ರಾನಿ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿದ್ದಾರೆಯೇ ಎಂಬ ಹಲವರ ಪ್ರಶ್ನೆಗಳ ಮಧ್ಯೆಯೇ ಆಕೆ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿರುವ ದಾಖಲೆಯೊಂದು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ. ಡ್ರಗ್ಸ್ ಕೇಸಿನಲ್ಲಿ  ಸಂಜನಾ ಗಾಲ್ರಾನಿಯ ಹೆಸರು ಮುನ್ನೆಲೆಗೆ ಬಂದಾಗಿನಿಂದ ಆಕೆಯ ಹಿಂದೆ ಬಿದ್ದಿರುವ ಮಾಧ್ಯಮಗಳಿಗೆ ಈ ವಿಷಯ ಆಹಾರವಾಗುವ ಎಲ್ಲಾ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ. ಈ ಕುರಿತು ಸಂಜನಾ ಆಗಲಿ ಅಥವಾ ಅವರ ಕುಟುಂಬಿಕರಾಗಲಿ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲವಾದರೂ, ಕಟ್ಟು ಕಥೆಗಳನ್ನು ಸೃಷ್ಟಿಸುವಲ್ಲಿ ನಿಪುಣರಾಗಿರುವ ಕೆಲ ಮಾಧ್ಯಮಗಳಿಗೆ ಮುಂದಿನ ಕೆಲವೊಂದು ದಿನಗಳು ಸುಗ್ಗಿಯಾಗಲಿದೆ.

- Advertisement -
ವೈರಲ್ ಆಗಿರುವ ಸಂಜನಾ ಹೆಸರಿನಲ್ಲಿರುವ ದಾಖಲೆ

2018ರಲ್ಲಿ ಟ್ಯಾನರಿ ರೋಡಿನ ದಾರುಲ್ ಉಲೂಮ್ ಶಾ ವಲಿಯುಲ್ಲಾಹ್ ಸಂಸ್ಥೆಯ ಹೆಸರಿನ ಲೆಟರ್ ಹೆಡ್ ಒಂದರಲ್ಲಿ ಅರ್ಚನಾ ಗಾಲ್ರಾನಿ ಎಂಬ ಹೆಸರಿನಲ್ಲಿ ನೀಡಿರುವ ಹೇಳಿಕೆಯಲ್ಲಿ, ಸಂಜನಾ ಅವರು ತನ್ನ ಸ್ವ ಇಚ್ಚೆಯಿಂದ ಇಸ್ಲಾಮ್ ಧರ್ಮಕ್ಕೆ ಮತಾಂತರವಾಗಿರುವ ಉಲ್ಲೇಖವಿದೆ.  ಚಿತ್ರರಂಗಕ್ಕೆ ಬಂದ ನಂತರ ತನ್ನ ಹೆಸರನ್ನು ಸಂಜನಾ ಗಾಲ್ರಾನಿ ಎಂದು ಬದಲಾಯಿಸಿದ್ದರು. ಮತಾಂತರಗೊಂಡ ನಂತರ ಅವರು ತನ್ನ ಹೆಸರನ್ನು ಮಾಹಿರಾ ಎಂದು ಬದಲಾಯಿಸಿದ್ದಾರೆ ಎನ್ನಲಾಗಿದೆ.  ಕೆಲ ದಿನಗಳ ಹಿಂದೆ ವೈದ್ಯ ಅಝೀಮ್ ಪಾಶಾರನ್ನು ಮದುವೆಯಾಗಿರುವ ಫೋಟೋವನ್ನು ಕೆಲ ಮಾಧ್ಯಮಗಳು ಹೊರಹಾಕಿದ್ದವು. ಅವರನ್ನು ಮದುವೆಯಾಗಲು ಬೇಕಾಗಿ ಮತಾಂತರವಾದರೋ ಅಥವಾ ಮದುವೆಯಾಗಿ ನಂತರ ಮತಾಂತರವಾದರೋ ಅಥವಾ ಇದು ಒಂದು ಅಧಿಕೃತ ದಾಖಲೆಯೇ ಎನ್ನುವುದರ ಕುರಿತು ಖುದ್ದು ಸಂಜನಾ ಅವರೇ ಸ್ಪಷ್ಟೀಕರಣ ನೀಡಬೇಕಾಗಿದೆ

Join Whatsapp