ಮಾಸ್ಕ್ ಹಾಕಿಲ್ಲವೆಂದು 500 ರೂ. ದಂಡ । 10 ಲಕ್ಷ ಪರಿಹಾರ ಕೋರಿದ ವಕೀಲ !

Prasthutha|

ತನ್ನ ಕಾರಿನಲ್ಲಿ ಓರ್ವನೇ ಡ್ರೈವಿಂಗ್ ಮಾಡುತ್ತಿರುವಾಗ ಮಾಸ್ಕ್ ಹಾಕಿಲ್ಲವೆಂದು ಪೊಲೀಸರು 500 ರೂಪಾಯಿಗಳ ದಂಡ ವಿಧಿಸಿದ್ದರಿಂದ ಕೆಂಡಾಮಂಡಲನಾಗಿರುವ ದೆಹಲಿ ವಕೀಲನೋರ್ವ ತನಗೆ 10 ಲಕ್ಷ ಪರಿಹಾರ ನೀಡಬೇಕೆಂದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಕಳೆದ 20 ವರ್ಷಗಳಿಂದ ವಕೀಲಿ ವೃತ್ತಿ ನಡೆಸುತ್ತಿರುವ ಸೌರಭ್ ಶರ್ಮಾ, ಸೆಪ್ಟಂಬರ್ 9 ರಂದು ದೆಹಲಿಯ ಗೀತಾ ಕಾಲನಿಯ ಬಳಿ ತನ್ನ ಕಾರು ನಿಲ್ಲಿಸಿದ ದೆಹಲಿ ಪೊಲೀಸರು ಕಾರಿನಲ್ಲಿರುವಾಗ ಮಾಸ್ಕ್ ಹಾಕಿಲ್ಲವೆಂದು 500 ರೂ ದಂಡ ಪಾವತಿಸುವಂತೆ ಮಾಡಿದ್ದರು.

- Advertisement -

ನಾನು ಕಾರಿನಲ್ಲಿ ಏಕಾಂಗಿಯಾಗಿ ಪ್ರಯಾಣಿಸುತ್ತಿದ್ದರೂ ನನ್ನನ್ನು ತಡೆದು ಯಾವುದೇ ಕಾನೂನು ಉಲ್ಲಂಘನೆ ಮಾಡದಿದ್ದರೂ ನನ್ನ ಮೇಲೆ ದಂಡ ಹಾಕಿದ್ದರು. ಇದಕ್ಕಾಗಿ ನಾನು “ಅನ್ಯಾಯದ ಮತ್ತು ಕಾನೂನುಬಾಹಿರ ನಿಲುಗಡೆ” ಮತ್ತು “ಸುಲಿಗೆ” ಮಾಡಿದ್ದರಿಂದಾಗಿ ನನಗೆ “ಭಾರಿ ಮಾನಸಿಕ ಪ್ರಕ್ಷುಬ್ಧತೆ ಮತ್ತು ಕಿರುಕುಳ” ಉಂಟಾಗಿದೆ ಎಂದು ಅವರು ವಾದಿಸಿದ್ದಾರೆ. ಇದಕ್ಕಾಗಿ ನಾನು ಪಾವತಿಸಿದ 500 ರೂ ದಂಡವನ್ನು ವಾಪಾಸ್ ಕೊಡಬೇಕು ಮಾತ್ರವಲ್ಲ ದೆಹಲಿ ಸರಕಾರದಿಂದ ಇದಕ್ಕಾಗಿ ನನಗೆ 10 ಲಕ್ಷ ರೂಪಾಯಿಗಳ ಪರಿಹಾರ ಕೊಡಬೇಕೆಂದು ಕೂಡಾ ಹೇಳಿದ್ದಾರೆ. ಸೌರಭ್ ಶರ್ಮಾರ ಪರವಾಗಿ ಕೆ ಸಿ ಮಿತ್ತಲ್ ಹಾಗೂ ಯುಗೇಂಶ್ ಮಿತ್ತಲ್ ವಾದಿಸಿದ್ದರು.

- Advertisement -