ಉತ್ತರಪ್ರದೇಶದಲ್ಲಿ ಕ್ರೈಸ್ತ ಸನ್ಯಾಸಿಗಳ ಮೇಲೆ ದಾಳಿ ಮಾಡಿದವರು ABVP ಕಾರ್ಯಕರ್ತರು : ರೈಲ್ವೆ ಅಧೀಕ್ಷಕ

Prasthutha|

ಉತ್ತರಪ್ರದೇಶದಲ್ಲಿ ಕ್ರೈಸ್ತ ಸನ್ಯಾಸಿಗಳ ಮೇಲೆ ಹಲ್ಲೆ ನಡೆಸಿದವರು ಎಬಿವಿಪಿ ಕಾರ್ಯಕರ್ತರೆಂದು ರೈಲ್ವೆ ಅಧೀಕ್ಷಕರು ಆರೋಪಿಸಿದ್ದಾರೆ. ಯುವತಿಯರನ್ನು ಬಲವಂತವಾಗಿ ಮತಾಂತರಕ್ಕೆ ಕರೆದೊಯ್ಯುತ್ತಿದ್ದಾರೆ ಎಂದು ಆರೋಪಿಸಿ ಹಿಂದುತ್ವವಾದಿಗಳ ಗುಂಪೊಂದು ರೈಲಿನಲ್ಲಿ ಸನ್ಯಾಸಿಗಳ ಮೇಲೆ ದಾಳಿ ಮಾಡಿ ಬೆದರಿಕೆ ಹಾಕಿತ್ತು.

- Advertisement -

ಋಷಿಕೇಶದ ಅಧ್ಯಯನ ಶಿಬಿರದಿಂದ ಹಿಂದಿರುಗುತ್ತಿದ್ದ ಎಬಿವಿಪಿ ಕಾರ್ಯಕರ್ತರು ಈ ದಾಳಿ ನಡೆಸಿದ್ದಾರೆ. ಈ ಹಿಂದೆ ಭಜರಂಗದಳದವರು ಈ ದಾಳಿ ನಡೆಸಿದ್ದಾರೆ ಎಂದು ವರದಿಯಾಗಿತ್ತು. ದೆಹಲಿಯಿಂದ ಒಡಿಶಾಕ್ಕೆ ತೆರಳುತ್ತಿದ್ದಾಗ ಹಿಂದುತ್ವವಾದಿಗಳು ಶಿರ ವಸ್ತ್ರ ಧರಿಸಿದ ಇಬ್ಬರು ಕ್ರೈಸ್ತ ಸನ್ಯಾಸಿಗಳು ಸೇರಿದಂತೆ ನಾಲ್ವರ ಮೇಲೆ ಹಲ್ಲೆ ನಡೆಸಿದ್ದರು. ಝಾನ್ಸಿ ರೈಲ್ವೇ ನಿಲ್ದಾಣದಲ್ಲಿ ಕ್ರೈಸ್ತ ಸನ್ಯಾಸಿಗಳನ್ನು ಕೆಳಗಿಳಿಸಿದ ಗುಂಪು, ಯುವತಿಯರನ್ನು ಮತಾಂತರಗೊಳಿಸಲು ಕರೆದೊಯ್ಯಲಾಗುತ್ತಿದೆ ಎಂದು ಆರೋಪಿಸಿ ದಾಳಿ ಮಾಡಿತ್ತು.

Join Whatsapp