ವಿಪಕ್ಷಗಳ ‘ಸಿಡಿ ರೋಚಕತೆ’ಯ ಮಧ್ಯೆಯೇ ಸರಕಾರದಿಂದ ಅಲ್ಪಸಂಖ್ಯಾತರ ಸಂಸ್ಥೆಗಳಿಗೆ ಆಡಳಿತಾಧಿಕಾರಿ ನೇಮಕ ವಿಧೇಯಕ ಅನುಮೋದನೆ !

Prasthutha|

► ಬಿಜೆಪಿಯಿಂದ ಸಂವಿಧಾನ ವಿರೋಧಿ ವಿಧೇಯಕ !
► ಕಾಂಗ್ರೆಸ್-ಜೆಡಿಎಸ್ ಸದನದಲ್ಲಿ ಈ ಕುರಿತು ಚರ್ಚೆಯೇ ನಡೆಸಿಲ್ಲ!

- Advertisement -

ಬಿಜೆಪಿಯ ರಮೇಶ್ ಜಾರಕಿಹೊಳಿ ಅವರದ್ದೆನ್ನಲಾದ ಸಿಡಿಯ ರೋಚಕ ಚರ್ಚೆಯ ಮಧ್ಯೆಯೇ ಆಡಳಿತಾರೂಢ ಬಿಜೆಪಿ ಸರ್ಕಾರ ಸಂವಿಧಾನ ವಿರೋಧಿ ವಿಧೇಯಕವಾಗಿರುವ ಅಲ್ಪ ಸಂಖ್ಯಾತರ ಸಂಸ್ಥೆಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸುವ ಕರ್ನಾಟಕ ಸೊಸೈಟಿಗಳ ನೋಂದಣಿ (ತಿದ್ದುಪಡಿ) ವಿಧೇಯಕಕ್ಕೆ ಅನುಮೋದನೆ ಪಡೆಯಲಾಗಿದೆ. ವಿಪರ್ಯಾಸವೆಂದರೆ ವಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಈ ಕ್ರುಇತು ಸದನದಲ್ಲಿ ಚರ್ಚೆಯೇ ನಡೆಸಿಲ್ಲ ಎನ್ನುವುದಾಗಿದೆ. ಈ ವಿಧೇಯಕದ ಮೂಲಕ ಅಲ್ಪಸಂಖ್ಯಾತ ಸಂಘ ಸಂಸ್ಥೆಗಳನ್ನು ಕೈವಶ ಮಾಡಿಕೊಳ್ಳುವ ಸಂಚು ಇದೆ ಎನ್ನಲಾಗಿದೆ.

ಸಿಡಿ ಪ್ರಕರಣವನ್ನು ಮುಂದಿಟ್ಟುಕೊಂಡು ಪ್ರಮುಖ ಪ್ರತಿಪಕ್ಷವಾಗಿರುವ ಕಾಂಗ್ರೆಸ್ ಸಿದ್ದರಾಮಯ್ಯ ನೇತೃತ್ವದಲ್ಲಿ ಧರಣಿ ಕೈಗೊಂಡಿತ್ತು. ಧರಣಿ ಕೈಬಿಡಲು ಸ್ಪೀಕರ್ ಕಾಗೇರಿಯವರು ಮನವಿ ಮಾಡಿದ್ದರೂ ಕಾಂಗ್ರೆಸ್ ಧರಣಿ ಮುಂದುವರಿಸಿತ್ತು. ಈ ನಡುವೆ ಶಾಸನ ರಚನೆಗೆ ಬಾಕಿಯಿದ್ದ ಕರ್ನಾಟಕ ಸೊಸೈಟಿಗಳ ನೋಂದಣಿ (ತಿದ್ದುಪಡಿ) ವಿಧೇಯಕವನ್ನು ಮಂಡಿಸಲು ಸ್ಪೀಕರ್ ಅವರು ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಅವರಿಗೆ ಸೂಚಿಸಿದ್ದಾರೆ.  ಆ ಬಳಿಕವೂ ಕಾಂಗ್ರೆಸ್ ನ ಗದ್ದಲದ ನಡುವೆಯೇ ಸ್ಪೀಕರ್ ಅವರು ವಿಧೇಯಕಕ್ಕೆ ವಿಧಾನಸಭೆಯ ಅನುಮೋದನೆ ದೊರಕಿದೆ ಎಂದು ಘೋಷಿಸಿದರು.

- Advertisement -

ಆ ಮೂಲಕ ಕಾಂಗ್ರೆಸ್ ಸೇರಿದಂತೆ ಇರುವ ವಿರೊಧ ಪಕ್ಷಗಳು ಸಿಡಿ ವಿಚಾರದಲ್ಲೇ ಮಗ್ನರಾಗಿರುವಾಗ ಬಿಜೆಪಿ ಮಾತ್ರ ತಮ್ಮ ಕಾರ್ಯಸೂಚಿಗಳಿಗೆ ಅನುಮೋದನೆ ಪಡೆದುಕೊಂಡು ಬಿಟ್ಟಿದೆ.

Join Whatsapp