ಅಬುಧಾಬಿ ಬಿಗ್ ಟಿಕೆಟ್ ಡ್ರಾ: ಕೇರಳದ ಲೀನಾ ಗೆ 44.75 ಕೋಟಿ ರೂ. ಬಹುಮಾನ

Prasthutha|

ಅಬುಧಾಬಿ: ಅಬುಧಾಬಿ ಬಿಗ್ ಟಿಕೆಟ್ ಡ್ರಾ ದಲ್ಲಿ ಕೇರಳದ  ತ್ರಿಶೂರ್ ಜಿಲ್ಲೆಯ  ಚಾವಕ್ಕಾಡ್ ನ ಅಂಜಂಙಾಡಿ ನಿವಾಸಿ ಲೀನಾ ಜಲಾಲ್ 44.75 ಕೋಟಿ ರೂ.ಗಳ (2.2 ಕೋಟಿ ದಿರ್ಹಮ್) ಬಹುಮಾನವನ್ನು ಗೆದ್ದಿದ್ದಾರೆ.

- Advertisement -

ಲೀನಾ ಅವರು ನಾಲ್ಕು ವರ್ಷಗಳಿಂದ ಅಬುಧಾಬಿಯ ಶೋಯಿಡರ್ ಪ್ರಾಜೆಕ್ಟ್ ಎಲೆಕ್ಟ್ರಾನಿಕ್ ಮೆಕ್ಯಾನಿಕಲ್ ಎಲ್ ಎಲ್ ಸಿ ಯಲ್ಲಿ ಎಚ್ ಆರ್ ಆಗಿ ಉದ್ಯೋಗ ನಿರ್ವಹಿಸುತ್ತಿದ್ದಾರೆ. ಲೀನಾ ಮತ್ತು ಅವರ 9 ಸಹೋದ್ಯೋಗಿಗಳು ಖರೀದಿಸಿದ  ಟಿಕೆಟ್  ಗಳಲ್ಲಿ ಲೀನಾ ಅವರ ಟಿಕೆಟ್ ಗೆ ಈ ಬಹುಮಾನ ಬಂದಿದೆ.

ಸ್ನೇಹಿತರು ಒಂದು ವರ್ಷದಿಂದ ಟಿಕೆಟ್ ತೆಗೆದುಕೊಳ್ಳುತ್ತಿದ್ದಾರೆ. ಆದರೆ ನನ್ನ ಹೆಸರಿನಲ್ಲಿ ಇದೇ ಮೊದಲ ಬಾರಿಗೆ ಟಿಕೆಟ್ ತೆಗೆದುಕೊಂಡಿದ್ದೇನೆ. ಬಹುಮಾನ ದೊರಕಿರುವ ಬಗ್ಗೆ ತಿಳಿಸಲು ಕರೆ ಬಂದಾಗ ಅದು ನಕಲಿ ಕರೆ ಎಂದು ಭಾವಿಸಿದ್ದೆ. ಅಷ್ಟು ದೊಡ್ಡ ಮೊತ್ತ ದೊರಕಿದೆ ಎಂಬುವುದು ನಂಬಲಸಾಧ್ಯವಾಗಿತ್ತು. ಉದ್ಯೋಗವನ್ನು ಮುಂದುವರಿಸುತ್ತೇನೆ ಎಂದು ಲೀನಾ ಹೇಳಿದರು.

Join Whatsapp