ಕೇಸರಿ ಶಾಲು ವಿವಾದ: ಕುಂದಾಪುರ ಸರಕಾರಿ ಪಿಯು ಕಾಲೇಜಿಗೆ ನಾಳೆ ರಜೆ ಘೋಷಣೆ

Prasthutha|

ಕುಂದಾಪುರ: ಕುಂದಾಪುರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕೇಸರಿ ಶಾಲು ವಿವಾದ ಉಂಟಾದ ಬೆನ್ನಲ್ಲೇ ನಾಳೆ ಕಾಲೇಜಿಗೆ ರಜೆ ನೀಡಲಾಗಿದೆ.

- Advertisement -

ಇಂದು ಕೂಡ ಕ್ಯಾಂಪಸ್ ಗೇಟ್ ದಾಟಿ ಒಳಗೆ ಬಂದ ವಿದ್ಯಾರ್ಥಿನಿಯರನ್ನು ಪ್ರಾಂಶುಪಾಲರು  ಮೈದಾನದಲ್ಲೇ ತಡೆದು ನಿಲ್ಲಿಸಿದ್ದು, ಈ ಹಿನ್ನೆಲೆಯಲ್ಲಿ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಕೇಸರಿ ಶಾಲನ್ನು ಬ್ಯಾಗಿನಲ್ಲಿ ಹಾಕಿಕೊಂಡು ಬಂದು ಕಾಲೇಜಿನಲ್ಲಿ ಧರಿಸಿದ್ದಾರೆ. ಈ ವೇಳೆ ಅವರನ್ನು ಕೂಡ ಕಾಲೇಜಿನ ಹೊರಗಡೆ ಕಳುಹಿಸಿದ್ದಾರೆ. ಈ ಗೊಂದಲದ ನಡುವೆ ಕಾಲೇಜಿಗೆ ರಜೆಯನ್ನು ನೀಡಿದ್ದಾರೆ.

Join Whatsapp