ಕೇರಳ ಕೋವಿಡ್ ಬಾಧಿತರ ಸಂಖ್ಯೆ ಹೆಚ್ಚುತ್ತಿರುವ ಏಕೈಕ ರಾಜ್ಯ: ಕೇಂದ್ರ ಆರೋಗ್ಯ ಸಚಿವಾಲಯ

Prasthutha|

ಹೊಸದಿಲ್ಲಿ: ಕೋವಿಡ್ ಸಾವುಗಳು ನಿಖರವಾಗಿ ವರದಿಯಾಗದೇ ಇರುವುದು ಕೇರಳದಲ್ಲಿ ರೋಗ ಹರಡಲು ಮುಖ್ಯ ಕಾರಣ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಆರೋಗ್ಯ ಸಚಿವಾಲಯದ ಜೊತೆ ಕಾರ್ಯದರ್ಶಿ ಲವ್ ಅಗರ್ವಾಲ್ ಅವರು ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ, ದೈನಂದಿನ ಪ್ರಕರಣಗಳ ಸಂಖ್ಯೆ ಮತ್ತು ಮತ್ತು ಮರಣ ಪ್ರಮಾಣವನ್ನು ನಿಖರವಾಗಿ ವರದಿ ಮಾಡುವ ಮೂಲಕ ಮಾತ್ರ ರೋಗ ಬಾಧಿತ ವಲಯವನ್ನು ವರ್ಗೀಕರಿಸಿ  ಹರಡುವಿಕೆಯನ್ನು ತಡೆಯಬಹುದು ಎಂದು ಹೇಳಿದರು.

- Advertisement -

ಅಕ್ಟೋಬರ್ ನಿಂದ ಫೆಬ್ರವರಿ 2 ರವರೆಗಿನ  24,730 ಸಾವುಗಳನ್ನು ಹಿಂದಿನ ಪಟ್ಟಿಗೆ ಸೇರಿಸಲಾಗಿದೆ. ಆದರೆ ಫೆಬ್ರವರಿ 2 ರಂದು ಕೇವಲ 1,000 ಸಾವುಗಳು ಮಾತ್ರ ಹಿಂದಿನ ಸಾವುಗಳು ಎಂದು ವರದಿಯಾಗಿದೆ.ಇಂತಹ ಅಚಾತುರ್ಯ  ಮುಂದುವರಿಯಬಾರದು ಎಂದು ಕೇಂದ್ರವು ಕೇರಳಕ್ಕೆ ಹಲವು ಬಾರಿ ಸೂಚನೆ ನೀಡಿದೆ.

  ಕೇರಳ, ತಮಿಳುನಾಡು, ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ಗುಜರಾತ್, ರಾಜಸ್ಥಾನ ಮತ್ತು ಮಧ್ಯಪ್ರದೇಶ ಸೇರಿದಂತೆ ಎಂಟು ರಾಜ್ಯಗಳಲ್ಲಿ 50,000 ಕ್ಕೂ ಹೆಚ್ಚು ಸಕ್ರಿಯ ರೋಗಿಗಳಿದ್ದಾರೆ. ಆದರೆ ಅನೇಕ ರಾಜ್ಯಗಳಲ್ಲಿ, ರೋಗಿಗಳ ಸಂಖ್ಯೆ ಈಗ ಕುಸಿಯುತ್ತಿದ್ದು ಎರಡು ವಾರಗಳಲ್ಲಿ 10% ಕ್ಕಿಂತ ಹೆಚ್ಚಿನ ರೋಗನಿರ್ಣಯ ಪ್ರಮಾಣವನ್ನು ಹೊಂದಿರುವ ಜಿಲ್ಲೆಗಳ ಸಂಖ್ಯೆ 406 ರಿಂದ 297 ಕ್ಕೆ ಇಳಿದಿದೆ. ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೇರಳದಲ್ಲಿ ಹೆಚ್ಚುತ್ತಿರುವ ಪ್ರಕರಣಗಳು ಆತಂಕಕ್ಕೆ ಕಾರಣವಾಗುತ್ತಿವೆ ಎಂದು ಕೇಂದ್ರ ಹೇಳಿದೆ. ಕೇರಳ ಮಾತ್ರ ನಿತ್ಯ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವ ರಾಜ್ಯ ಎಂದು ಕೇಂದ್ರ ಹೇಳಿದೆ.

Join Whatsapp