ಮನುವಾದಿಗಳ ಆಡಳಿತದಲ್ಲಿ ಜಾತಿವಾದಿ ಗೂಂಡಾಗಳಿಗೆ ಓಪನ್ ಲೈಸೆನ್ಸ್ ದೊರಕಿದಂತಾಗಿದೆ: ಅಬ್ದುಲ್ ಮಜೀದ್ ಮೈಸೂರು

Prasthutha|

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆ ಹಾವೇರಿಯಲ್ಲಿ ದಲಿತರ ಮೇಲೆ ದೌರ್ಜನ್ಯವೆಸಗಿದ್ದ ದುಷ್ಕರ್ಮಿಗಳ ಕ್ರಮವನ್ನು ತೀವ್ರವಾಗಿ ಖಂಡಿಸಿದ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಪಕ್ಷದ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು, ಮನುವಾದಿಗಳ ಆಡಳಿತದಲ್ಲಿ ಜಾತಿವಾದಿ ಗೂಂಡಾಗಳಿಗೆ ಓಪನ್ ಲೈಸೆನ್ಸ್ ದೊರಕಿದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಈ ಕುರಿತು ಟ್ವೀಟ್ ಮಾಡಿರುವ ಅವರು, ಮೇಲ್ವರ್ಗದರಿದ್ದ ಧಾರ್ಮಿಕ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು ಎಂಬ ಕಾರಣಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ ಅವರ ತವರು ಜಿಲ್ಲೆಯಲ್ಲಿ ಇಬ್ಬರು ದಲಿತ ಮನೆಗಳಿಗೆ ಬೆಂಕಿ ಹಚ್ಚಿ 12 ಜನರನ್ನು ಜೀವಂತ ಸುಡುವ ಪ್ರಯತ್ನ ನಡೆದಿದೆ. ಮನುವಾದಿಗಳ ಆಡಳಿತದಲ್ಲಿ ಜಾತಿವಾದಿ ಗೂಂಡಾಗಳಿಗೆ ಓಪೆನ್ ಲೈಸೆನ್ಸ್ ದೊರಕಿದಂತಾಗಿದೆ ಎಂದು ಕಿಡಿಕಾರಿದ್ದಾರೆ.

ಭಾನುವಾರ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ನಂದಿಹಳ್ಳಿ ಗ್ರಾಮದ ದಲಿತ ಕುಟುಂಬಗಳ ಎರಡು ಮನೆಗಳಿಗೆ ಬೆಂಕಿ ಹಚ್ಚಲಾಗಿತ್ತು.  ಗ್ರಾಮದ ದಲಿತ ಕಾಲೋನಿಯಿಂದ ಧಾರ್ಮಿಕ ಮೆರವಣಿಗೆ ಸಾಗುತ್ತಿದ್ದಾಗ ಕಾರ್ಯಕ್ರಮದಲ್ಲಿ ಪಾಲ್ಗೊಂಡ ದಲಿತರ ವಿರುದ್ಧ ಆಕ್ರೋಶಿತರಾದ ಮೇಲ್ವರ್ಗದ ಜನರು ದಲಿತರ ಮನೆಗಳಿಗೆ ಬೆಂಕಿ ಹಚ್ಚಿ ದಾಂಧಲೆ ನಡೆಸಿದ್ದರು.

Join Whatsapp