ಬಾಲಿವುಡ್​ನ ಹಿರಿಯ ನಟ, ನಿರ್ದೇಶಕ ಸತೀಶ್ ಕೌಶಿಕ್ ಹೃದಯಾಘಾತದಿಂದ ನಿಧನ

Prasthutha|

ಹೊಸದಿಲ್ಲಿ: ಬಾಲಿವುಡ್‌ನ ಹಿರಿಯ ನಟ, ನಿರ್ದೇಶಕ ಸತೀಶ್ ಕೌಶಿಕ್ ಹೃದಯಾಘಾತದಿಂದ ಬುಧವಾರ (ಮಾರ್ಚ್​ 8) ರಾತ್ರಿ ನಿಧನ ಹೊಂದಿದ್ದಾರೆ.

- Advertisement -

ಅವರಿಗೆ 66 ವರ್ಷ ವಯಸ್ಸಾಗಿತ್ತು. ಸತೀಶ್ ನಿಧನ ವಾರ್ತೆಯನ್ನು ಬಾಲಿವುಡ್​ನ ಹಿರಿಯ ನಟ ಅನುಪಮ್ ಖೇರ್ ಅವರು ತಿಳಿಸಿ, ಟ್ವಿಟರ್​ನಲ್ಲಿ ಸಂತಾಪ ಸೂಚಿಸಿದ್ದಾರೆ.

‘ನನಗೆ ಗೊತ್ತು ಸಾವು ಈ ಜಗತ್ತಿನ ಪರಮ ಸತ್ಯ. ನಾನು ಬದುಕಿರುವಾಗ ನನ್ನ ಆತ್ಮೀಯ ಗೆಳೆಯ ಸತೀಶ್ ಕೌಶಿಕ್ ಬಗ್ಗೆ ಈ ವಿಷಯ ಬರೆಯುತ್ತೇನೆ ಎಂದು ನಾನು ನನ್ನ ಕನಸಿನಲ್ಲೂ ಯೋಚಿಸಿರಲಿಲ್ಲ. 45 ವರ್ಷಗಳ ಸ್ನೇಹಕ್ಕೆ ಇದ್ದಕ್ಕಿದ್ದಂತೆ ಪೂರ್ಣ ವಿರಾಮ. ನೀನಿಲ್ಲದೆ ನನ್ನ ಜೀವನ ಎಂದಿಗೂ ಮೊದಲಿನಂತೆ ಆಗುವುದಿಲ್ಲ ಸತೀಶ್. ಓಂ ಶಾಂತಿ’ ಎಂದು ಅವರು ಟ್ವೀಟ್ ಮಾಡಿದ್ದಾರೆ.

- Advertisement -

ಸತೀಶ್ ಅವರು ಹಲವು ಪಾತ್ರಗಳ ಮೂಲಕ ಗಮನ ಸೆಳೆದಿದ್ದಾರೆ. ಅವರು ಪೋಷಕ ಪಾತ್ರಗಳ ಮೂಲಕ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು. 1983ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಅವರು, ‘ಜಲ್ವಾ’, ‘ಸ್ವರ್ಗ್​’, ‘ಆಂಟಿ ನಂಬರ್ 1’, ‘ಕಲ್ಕತ್ತಾ ಮೇಲ್​’, ‘ಭಾಗಿ 3’ ಸೇರಿ ನೂರಾರು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.

ಕಂಗನಾ ರಣಾವತ್ ನಿರ್ದೇಶಿಸಿ, ನಟಿಸುತ್ತಿರುವ ‘ಎಮರ್ಜೆನ್ಸಿ’ ಚಿತ್ರದಲ್ಲಿ ಜಗ್​ಜೀವನ್ ರಾಮ್ ಪಾತ್ರವನ್ನು ಅವರು ಮಾಡುತ್ತಿದ್ದರು. ಈ ಸಿನಿಮಾ ತೆರೆಗೆ ಬರುವುದಕ್ಕೂ ಮೊದಲೇ ಸತೀಶ್​ ನಿಧನ ಹೊಂದಿದ್ದಾರೆ. ಈ ಬಗ್ಗೆ ಕಂಗನಾ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.

Join Whatsapp