ರೈತರಿಗೆ ಕೇಜ್ರಿವಾಲ್ ಬೆಂಬಲ | ಬಿಜೆಪಿ ಕಾರ್ಯಕರ್ತರಿಂದ ಆಪ್ ಶಾಸಕ ರಾಘವ ಛಡ್ಡಾ ಕಚೇರಿ ಧ್ವಂಸ

Prasthutha|

ನವದೆಹಲಿ : ದೆಹಲಿ ಜಲ ಮಂಡಳಿ ಉಪಾಧ್ಯಕ್ಷ, ಆಪ್ ಶಾಸಕ ರಾಘವ ಛಡ್ಡಾ ಅವರ ಕಚೇರಿಗೆ ನುಗ್ಗಿದ ಬಿಜೆಪಿ ಕಾರ್ಯಕರ್ತರು ಸಂಪೂರ್ಣ ಕಚೇರಿಯನ್ನು ಧ್ವಂಸಗೈದಿದ್ದಾರೆ. ರೈತರ ಪ್ರತಿಭಟನೆ ಬೆಂಬಲಿಸಿದ ಕಾರಣಕ್ಕಾಗಿ ಈ ದಾಳಿ ನಡೆದಿದೆ ಎನ್ನಲಾಗಿದೆ.

ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ರೈತರ ಪರವಾಗಿ ಮಾತನಾಡುವುದನ್ನು ನಿಲ್ಲಿಸಬೇಕು ಎಂಬುದಾಗಿ ಬಿಜೆಪಿ ಕಾರ್ಯಕರ್ತರು ಬೆದರಿಕೆಯೊಡ್ಡಿದ್ದಾರೆ ಎಂದು ಪತ್ರಕರ್ತರೊಂದಿಗೆ ಮಾತನಾಡಿದ ಛಡ್ಡಾ ತಿಳಿಸಿದ್ದಾರೆ.

- Advertisement -

ತಮ್ಮ ಪಕ್ಷ ಮತ್ತು ಸರಕಾರ ಕೊನೆಯ ಉಸಿರಿರುವವರೆಗೂ ರೈತರನ್ನು ಬೆಂಬಲಿಸುತ್ತದೆ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ ಬೆನ್ನಲ್ಲೇ ಈ ದಾಳಿ ನಡೆದಿದೆ.

ಕಚೇರಿಯ ಗಾಜುಗಳನ್ನು ಒಡೆಯಲಾಗಿದೆ, ಸಿಬ್ಬಂದಿಯ ಮೇಲೆಯೂ ದಾಳಿ ಮಾಡಲಾಗಿದೆ ಮತ್ತು ಬೆದರಿಕೆಯೊಡ್ಡಲಾಗಿದೆ ಎಂದು ವರದಿಯಾಗಿದೆ.

“ಇಂತಹ ದಾಳಿಗಳಿಗೆ ನಾವು ಹೆದರುವುದಿಲ್ಲ. ಬಿಜೆಪಿಯ ಇಂತಹ ದಾಳಿಗಳಿಂದ ಕಾರ್ಯಕರ್ತರು ಪ್ರಚೋದನೆಗೊಳಗಾಗಬಾರದು ಎಂದು ನಾನು ವಿನಂತಿಸುತ್ತೇನೆ. ರೈತರನ್ನು ಸಂಪೂರ್ಣವಾಗಿ ಬೆಂಬಲಿಸುವಂತೆ ಕೋರುತ್ತೇನೆ” ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.   

- Advertisement -