ಗಂಗೊಳ್ಳಿ ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫೋರಂ ವತಿಯಿಂದ ರಕ್ತದಾನ ಶಿಬಿರ

Prasthutha|

ಕುಂದಾಪುರ : ಗಂಗೊಳ್ಳಿಯಲ್ಲಿ ಪಾಪ್ಯುಲರ್ ಫ್ರoಟ್ ಬ್ಲಡ್ ಡೋನರ್ಸ್ ಫೋರಂ ಗಂಗೊಳ್ಳಿ ಇದರ ಉದ್ಘಾಟನಾ ಸಮಾರಂಭದ ಪ್ರಯುಕ್ತ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ, ಬ್ಲಡ್ ಬ್ಯಾಂಕ್ ಕುಂದಾಪುರ ಇವರ ಸಹಯೋಗದಲ್ಲಿ ರಕ್ತದಾನ ಶಿಬಿರ ಏರ್ಪಡಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಪಾಪ್ಯುಲರ್ ಫ್ರಂಟ್ ಬ್ಲಡ್‌ ಡೋನರ್ಸ್ ಫೋರಂನ ಅಧ್ಯಕ್ಷರಾದ ಇಫ್ತೀಕಾರ್ ಅಹಮದ್ ವಹಿಸಿದ್ದರು.

- Advertisement -

ಅತಿಥಿಗಳಾದ ಆಸಿಫ್ ಕೊಟೇಶ್ವರ, ಮೌಲಾನಾ ಮುಝಮ್ಮಿಲ್, ನವಾಜ್ ಕುಂದಾಪುರ, ಲಿಯಾಕತ್ ಕಂಡ್ಲೂರು, ಡಾ. ಶರಣು, ತೌಫಿಕ್ ಗಂಗೊಳ್ಳಿ, ಖಲಿಫೆ ಯೂನುಸ್ ಸಾಹೇಬ್ ಇವರ ಸಮ್ಮುಖದಲ್ಲಿ ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫೋರಂನ ಉದ್ಘಾಟನೆ ನೆರವೇರಿತು.

ಹಲವು ಸಲ ರಕ್ತದಾನ ಮಾಡಿರುವಂತಹ ನವಾಜ್ ಕುಂದಾಪುರ ಇವರನ್ನು ಸನ್ಮಾನಿಸಲಾಯಿತು.

- Advertisement -

ರಕ್ತದಾನ ಶಿಬಿರದಲ್ಲಿ ದಾನಿಗಳಿಂದ 66 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು.

Join Whatsapp