ಹರೇಕಳ : DYFI – ಕಾಂಗ್ರೆಸ್ ಕಾರ್ಯಕರ್ತರ ನಡುವೆ ವಾಗ್ವಾದ; ತಳ್ಳಾಟ, ಹೊಡೆದಾಟ

Prasthutha|

ಕೊಣಾಜೆ : ಗ್ರಾಮ ಪಂಚಾಯತ್ ಚುನಾವಣೆಗೆ ಸಂಬಂಧಿಸಿದಂತೆ ಹರೇಕಳದಲ್ಲಿ ಡಿವೈಎಫ್ ಐ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ.

- Advertisement -

ಹರೇಕಳ 3ನೇ ವಾರ್ಡ್ ನಿಂದ ಸಿಪಿಐಎಂ ಬೆಂಬಲಿತ ಅಭ್ಯರ್ಥಿಗಳಾಗಿ ಮುಹಮ್ಮದ್ ಅಶ್ರಫ್, ಮುಹಮ್ಮದ್ ಇಕ್ಬಾಲ್, ಅನುಸೂಯ ಎಂಬವರು ಸ್ಪರ್ಧಿಸಿದ್ದರು. ಗುರುವಾರ ಬೆಳಗ್ಗೆ ಫರೀದ್ ನಗರದಲ್ಲಿ ಅಶ್ರಫ್ ಅವರ ತಾಯಿಯೊಂದಿಗೆ ಕಾಂಗ್ರೆಸ್ ಕಾರ್ಯಕರ್ತ ಮುನೀರ್ ಎಂಬಾತ ಚುನಾವಣಾ ವಿಚಾರದಲ್ಲಿ ವಾಗ್ವಾದ ಮಾಡಿ ನಿಂದಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಈ ವೇಳೆ ಮಧ್ಯಪ್ರವೇಶಿಸಿದ ಇಕ್ಬಾಲ್ ಮಹಿಳೆಯೊಂದಿಗೆ ಯಾಕೆ ವಾಗ್ವಾದ ನಡೆಸುತ್ತೀರಿ? ಚುನಾವಣೆ ಮುಗಿದುಹೋದ ಅಧ್ಯಾಯ ಎಂದು ಹೇಳಿರುವುದಾಗಿ ವರದಿಯಾಗಿದೆ. ಆಗ ಮುನೀರ್ ಕೋಪದಿಂದ ಇಕ್ಬಾಲ್ ರನ್ನು ದೂಡಿದ್ದು, ಇವರ ನಡುವೆ ತಳ್ಳಾಟ ನಡೆದಿದೆ ಎಂದು ತಿಳಿದುಬಂದಿದೆ.

- Advertisement -

ಇಕ್ಬಾಲ್ ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.  ಈ ನಡುವೆ, ತನಗೆ ಡಿವೈಎಫ್ ಐ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಮುನೀರ್ ಕೂಡ ದೂರು ದಾಖಲಿಸಿದ್ದಾರೆ ಎಂದು ವರದಿಯಾಗಿದೆ. ಕೊಣಾಜೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.  

Join Whatsapp