11 ಭಾಷೆಗಳಲ್ಲಿ ಪೋಸ್ಟರ್‌ ಅಂಟಿಸಿ ಪ್ರಧಾನಿ ವಿರುದ್ಧ ಪ್ರತಿಭಟನೆ ಮಾಡಲು ಎಎಪಿ ನಿರ್ಧಾರ

Prasthutha|

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಪೋಸ್ಟರ್‌ಗಳನ್ನು ಅಂಟಿಸುವ ಮೂಲಕ ಮಾರ್ಚ್‌ 30ರಂದು ದೇಶದಾದ್ಯಂತ ಪ್ರತಿಭಟನೆ ನಡೆಸುವುದಾಗಿ ಆಮ್‌ ಆದ್ಮಿ ಪಕ್ಷ ಮಂಗಳವಾರ ತಿಳಿಸಿದೆ.

- Advertisement -

‘ಪ್ರತಿಭಟನೆ ಸಂಬಂಧ 11 ಭಾಷೆಗಳಲ್ಲಿ ಪೋಸ್ಟರ್‌ಗಳನ್ನು ಸಿದ್ಧಪಡಿಸಲಾಗಿದೆ’ ಎಂದು ದೆಹಲಿ ರಾಜ್ಯ ಸಂಚಾಲಕ ಹಾಗೂ ಪರಿಸರ ಸಚಿವ ಗೋಪಾಲ್‌ ರೈ ಅವರು ತಿಳಿಸಿದರು.

ದೆಹಲಿಯ ಗೋಡೆ ಗೋಡೆಗಳ ಮೇಲೆ ಹಾಗೂ ಎಲೆಕ್ಟ್ರಿಲ್‌ ಕಂಬಗಳ ಮೇಲೆ ಆಮ್‌ ಆದ್ಮಿ ಪಕ್ಷದ ಕಾರ್ಯಕರ್ತರು ‘ಮೋದಿಯನ್ನು ಇಳಿಸಿ, ದೇಶವನ್ನು ಉಳಿಸಿ’ ಎಂಬ ಬರಹ ಇದ್ದ ಪೋಸ್ಟರ್‌ಗಳನ್ನು ಕಳೆದ ವಾರ ಅಂಟಿಸಿದ್ದರು. ಈ ಸಂಬಂಧ ಆರು ಮಂದಿಯನ್ನು ಬಂಧಿಸಲಾಗಿತ್ತು. ಜೊತೆಗೆ 49 ಎಫ್‌ಐಆರ್‌ಗಳನ್ನು ದಾಖಲು ಮಾಡಲಾಗಿದೆ.

Join Whatsapp