ಬೆನ್ನೆಲುಬಿಲ್ಲದ ವಿರೋಧ ಪಕ್ಷಗಳ ಮೌನ ಸಮ್ಮತಿಯೇ 2ಬಿ ಮೀಸಲಾತಿ ರದ್ದುಗೊಳಿಸಲು ಪ್ರಮುಖ ಕಾರಣ: ರಿಯಾಝ್ ಫರಂಗಿಪೇಟೆ

Prasthutha|

ಉಳ್ಳಾಲ: ಇತ್ತೀಚೆಗೆ ರಾಜ್ಯದಲ್ಲಿರುವ ಬೊಮ್ಮಾಯಿ ಸರ್ಕಾರ ಮುಸ್ಲಿಮರಿಗೆ ನೀಡಲಾಗಿದ್ದ 4 ಶೇಕಡಾ 2ಬಿ ಮೀಸಲಾತಿಯನ್ನು ರದ್ದುಗೊಳಿಸಿ, ಲಿಂಗಾಯುತ ಮತ್ತು ಒಕ್ಕಲಿಗ ಸಮುದಾಯಕ್ಕೆ ತಲಾ 2 ಶೇಕಡಾ ಅನುಪಾತದಲ್ಲಿ ಹಂಚಿದ್ದು, ಇದನ್ನು ವಿರೋಧಿಸಿ ದೇರಳಕಟ್ಟೆಯಲ್ಲಿ ಪ್ರತಿಭಟನಾ ಸಭೆ ನಡೆಯಿತು.

- Advertisement -

ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಎಸ್ ಡಿ ಪಿ ಐ ಮಂಗಳೂರು ವಿಧಾನಸಭಾ ಕ್ಷೇತ್ರ ಚುನಾವಣಾ ಅಭ್ಯರ್ಥಿ ರಿಯಾಝ್ ಫರಂಗಿಪೇಟೆ, ರಾಜ್ಯ ಸರ್ಕಾರವು ಮುಸ್ಲಿಂ ಸಮುದಾಯದ ಪ್ರವರ್ಗ 2ಬಿ ಶೇಕಡಾ 4ಮೀಸಲಾತಿ ಯನ್ನು ರದ್ದುಗೊಳಿಸಿರುವುದು ಖಂಡನೀಯವಾಗಿದ್ದು, ಈ ಮೀಸಲಾತಿಯನ್ನು ಪುನರ್ ಸ್ಥಾಪಿಸಬೇಕು ಇಲ್ಲದಿದ್ದಲ್ಲಿ ದೊಡ್ಡ ಮಟ್ಟದ ಹೋರಾಟವನ್ನು SDPI ಪಕ್ಷವು ರಂಝಾನ್ ನಂತರ ಸಂಘಟಿಸಲಿದೆ. ವಿರೋಧ ಪಕ್ಷಗಳ ಮೌನ ಸಮ್ಮತಿಯೇ 2ಬಿ ಮೀಸಲಾತಿ ರದ್ದುಗೊಳಿಸಲು ಪ್ರಮುಖ ಕಾರಣ ಎಂದು ಕಿಡಿಕಾರಿದರು.


ಬೀದಿ ಹೋರಾಟದಿಂದ ಏನನ್ನೂ ಸಾಧಿಸಲಾರಿರಿ ಎಂದು ಲೇವಡಿ ಮಾಡಿದವರನ್ನು ಕುಟುಕಿದ ರಿಯಾಝ್ ಫರಂಗಿಪೇಟೆ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು ಬೀದಿ ಹೋರಾಟಗಳಿಂದ ಎಂದು ನೆನಪಿಸಿದರು.
ಇಲ್ಲಿ ಹಿಂದೂ ಮುಸಲ್ಮಾನರು ಅನ್ಯೋನ್ಯತೆಯಿಂದ ಜೀವಿಸುತ್ತಿದ್ದು ಇದನ್ನು ಸಹಿಸದ ಫ್ಯಾಸಿಸ್ಟ್ ಶಕ್ತಿಗಳು ಇಂತಹ ಕಾರ್ಯಗಳನ್ನು ಮಾಡಿ ನಮ್ಮ ನಡುವೆ ಹುಳಿ ಹಿಂದುತ್ತದೆ ಎಂದು ತಿಳಿಸಿದರು.

- Advertisement -

SDPI ಕರ್ನಾಟಕ ರಾಜ್ಯ ಸಮಿತಿ ಸದಸ್ಯರಾದ ಅತಾವುಲ್ಲ ಜೋಕಟ್ಟೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಇನ್ನೊಬ್ಬ ಅತಿಥಿ ರಹಿಮಾನ್ ಬೋಳಿಯಾರ್ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಈ ಪ್ರತಿಭಟನಾ ಸಭೆಯಲ್ಲಿ ಎಸ್.ಡಿ.ಪಿ.ಐ ಕ್ಷೇತ್ರ ಸಮಿತಿ ಅಧ್ಯಕ್ಷ ಇರ್ಷಾದ್ ಅಜ್ಜಿನಡ್ಕ, ರಾಜ್ಯ ನಾಯಕರಾದ ನವಾಝ್ ಉಳ್ಳಾಲ್, ಎಸ್.ಡಿ.ಪಿ.ಐ ಕ್ಷೇತ್ರ ಸಮಿತಿಯ ಕಾರ್ಯದರ್ಶಿ ಅಶ್ರಫ್ ಮಂಚಿ, ಕ್ಷೇತ್ರ ಸಮಿತಿ ಜೊತೆ ಕಾರ್ಯದರ್ಶಿ ಉಬೈದ್ ಅಮ್ಮೆಂಬಳ, ಕೋಶಾಧಿಕಾರಿ ಲತೀಫ್ ಕೋಡಿಜಾಲ್, ಕ್ಷೇತ್ರ ಸಮಿತಿ ಸದಸ್ಯರಾದ ನೌಷಾದ್ ಕಿನ್ಯ, ಸುಹೈಲ್ ಉಳ್ಳಾಲ್, ಉಳ್ಳಾಲ ನಗರ ಸಮಿತಿ ಅಧ್ಯಕ್ಷ ಅಬ್ಬಾಸ್ ಎ.ಆರ್, ಉಪಾಧ್ಯಕ್ಷ ಇಂತಿಯಾಝ್ ಕೋಟೆಪುರ ಬ್ಲಾಕ್ ಅಧ್ಯಕ್ಷರು ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

Join Whatsapp