ಮೀಸಲಾತಿಯು ಮುಸ್ಲಿಮರ ಹಕ್ಕು ಹೊರತು ಔದಾರ್ಯವಲ್ಲ: ಇಲ್ಯಾಸ್ ತುಂಬೆ

Prasthutha|

►ಮುಸ್ಲಿಮರ 2B ಮೀಸಲಾತಿ ರದ್ದತಿ ವಿರುದ್ಧ SDPI ಬಂಟ್ವಾಳ ವತಿಯಿಂದ ಪ್ರತಿಭಟನೆ

- Advertisement -

ಬಂಟ್ವಾಳ : ಕರ್ನಾಟಕ ಬಿಜೆಪಿ ಸರಕಾರ ಇತ್ತೀಚೆಗೆ 2B ಮೀಸಲಾತಿಯನ್ನು ರದ್ದು ಮಾಡಿದ್ದನ್ನು ವಿರೋಧಿಸಿ ಹಾಗೂ 2B ಮೀಸಲಾತಿಯನ್ನು ಪುನಃ ಸ್ಥಾಪಿಸಲು ಆಗ್ರಹಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬಂಟ್ವಾಳ ವಿಧಾನಸಭಾ ಕ್ಷೇತ್ರ ವತಿಯಿಂದ ಬಿ.ಸಿ ರೋಡಿನ ಕೈಕಂಬ ಜಂಕ್ಷನ್ ನಲ್ಲಿ ಬೃಹತ್ ಪ್ರತಿಭಟನೆ ಜರುಗಿತು.

ಎಸ್ ಡಿ ಪಿ ಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಮೂನಿಷ್ ಆಲಿ ಬಂಟ್ವಾಳ ಪ್ರತಿಭಟನಾಕಾರರನ್ನುದ್ದೇಶಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.

- Advertisement -

ಬಂಟ್ವಾಳ ವಿಧಾನಸಭಾ ಕ್ಷೇತ್ರದ SDPI ಅಭ್ಯರ್ಥಿ ಹಾಗೂ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮುಹಮ್ಮದ್ ತುಂಬೆ ಅವರು ಮಾತನಾಡಿ, ಈ 2B ಮೀಸಲಾತಿಯ ರದ್ದತಿಯು ಬಿಜೆಪಿ ಉದ್ದೇಶಿಸಿಕೊಂಡಿರುವ ಹಿಂದೂ ರಾಷ್ಟ್ರದ ಸಂಕಲ್ಪದ ಮುಂದುವರಿದ ಭಾಗವಾಗಿದೆ. ಮುಖ್ಯಮಂತ್ರಿ ಬೊಮ್ಮಾಯಿ ಆರೆಸ್ಸೆಸ್ಸಿನ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ. ಮೀಸಲಾತಿಯು ಮುಸಲ್ಮಾನರಿಗೆ ಸರಕಾರಗಳು ನೀಡುವ ಭಿಕ್ಷೆ ಅಥವಾ ಔದಾರ್ಯವಲ್ಲ. ಅದು ಮುಸಲ್ಮಾನರ ಹಕ್ಕಿನ ಭಾಗ. ಇದರ ವಿರುದ್ಧ SDPI ಇನ್ನಿತರ ಪ್ರಗತಿಪರ ಹಾಗೂ ಮುಸ್ಲಿಂ ಸಂಘಟನೆಗಳನ್ನು ಜೊತೆಗೂಡಿಸಿಕೊಂಡು  ಕಾನೂನಾತ್ಮಕವಾಗಿ ಹೋರಾಟ ಮಾಡಲಿದೆ ಎಂದು ಸರಕಾರವನ್ನು ಎಚ್ಚರಿಸಿದರು.

ಈ ಸಂದರ್ಭದಲ್ಲಿ SDPI ದ.ಕ ಜಿಲ್ಲಾ ಸಮಿತಿ ಸದಸ್ಯ ಯೂಸುಫ್ ಆಲಡ್ಕ, ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ಕಲಂದರ್ ಪರ್ತಿಪಾಡಿ, ಕ್ಷೇತ್ರ ಸಮಿತಿ ಸದಸ್ಯ ಶಾಹುಲ್ ಎಸ್ ಎಚ್, ಬಂಟ್ವಾಳ ಪುರಸಭಾ ಸಮಿತಿ ಅಧ್ಯಕ್ಷರಾದ ಶರೀಫ್ ವಳವೂರು ಮತ್ತು ಕಾರ್ಯಕರ್ತರು, ಹಿತೈಷಿಗಳು ಉಪಸ್ಥಿತರಿದ್ದರು.

SDPI ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಸದಸ್ಯ ಮುಬಾರಕ್ ಗೂಡಿನಬಳಿ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಅಶ್ರಫ್ ತಲಪಾಡಿ ಕಾರ್ಯಕ್ರಮ ನಿರೂಪಿಸಿದರು.

Join Whatsapp