ತಿಹಾರ್ ನಲ್ಲಿ AAP ಕಾ ದರ್ಬಾರ್ : ಸತ್ಯೇಂದರ್ ಜೈನ್  ಕುರಿತು ಬಿಜೆಪಿ ಟೀಕೆ

Prasthutha|

ನವದೆಹಲಿ: ಆಮ್ ಆದ್ಮಿ ಪಕ್ಷದ ನಾಯಕ ಸತ್ಯೇಂದ್ರ ಜೈನ್ ಗೆ ವಿವಿಐಪಿ ಸೌಲಭ್ಯ ನೀಡುತ್ತಿರುವುದಕ್ಕೆ  ಆಮ್ ಆದ್ಮಿ ಪಕ್ಷದ ವಿರುದ್ಧ ಬಿಜೆಪಿ ಕಿಡಿ ಕಾರಿದೆ.

- Advertisement -

ಸತ್ಯೇಂದರ್ ಜೈನ್ ಅವರು ಜೈಲಿನ ಸೂಪರಿಂಟೆಂಡೆಂಟ್ ಅಜಿತ್ ಕುಮಾರ್ ಅವರೊಂದಿಗೆ ಸಂಭಾಷಣೆ ನಡೆಸುತ್ತಿರುವುದನ್ನು ತೋರಿಸುವ ಹೊಸ ಸಿಸಿಟಿವಿ ದೃಶ್ಯಾವಳಿಗಳು ಶನಿವಾರ ಹೊರಬಂದ ಬೆನ್ನಲ್ಲೇ, ತಿಹಾರ್ ಜೈಲಿನಲ್ಲಿರುವ ಸಚಿವರಿಗೆ “ವಿವಿಐಪಿ” ಚಿಕಿತ್ಸೆ ನೀಡಿದ್ದಕ್ಕಾಗಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಪೂನಾವಾಲಾ, ಈ ಬಾರಿ ಸತ್ಯೇಂದ್ರ ಕಾ ದರ್ಬಾರ್ ಜೈಲ್ ಸೂಪರಿಂಟೆಂಡೆಂಟ್ ಆಗಿದೆ. ಅವರನ್ನು ಈಗ ಅಮಾನತುಗೊಳಿಸಲಾಗಿದೆ ಎಂದಿದ್ದಾರೆ.

- Advertisement -

ಇಷ್ಟಾದ ಮೇಲೆಯಾದರೂ ಕೇಜ್ರಿವಾಲ್ ಜೈನ್ ಅವರನ್ನು  ವಜಾ ಮಾಡುತ್ತಾರೆಯೇ ಎಂದು ಬಿಜೆಪಿ ಪ್ರಶ್ನಿಸಿದೆ.

Join Whatsapp