ಛತ್ತೀಸ್‌ಗಢದಲ್ಲಿ ಬುಡಕಟ್ಟು ನಾಯಕನಿಗೆ ಸಿಎಂ ಪಟ್ಟ ಸಾಧ್ಯತೆ

Prasthutha|

ರಾಯ್‌ಪುರ: ಪಂಚ ರಾಜ್ಯ ಚುನಾವಣೆ ಪೈಕಿ ಕಾಂಗ್ರೆಸ್‌ಗೆ ಅತಿ ಹೆಚ್ಚು ವಿಶ್ವಾಸ ಇದ್ದದ್ದು ಛತ್ತೀಸ್‌ಗಢದಲ್ಲಿ. 75ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂದು ಘೋಷಣೆಯನ್ನು ಕಾಂಗ್ರೆಸ್ ಕೂಗಿತ್ತು. ಬುಡಕಟ್ಟು ಸಮುದಾಯ, ಒಬಿಸಿ ಸಮುದಾಯಗಳೇ ಹೆಚ್ಚಿರುವ ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ನಿರೀಕ್ಷೆ ಹುಸಿಗೊಳಿಸಿ ಬಿಜೆಪಿ ವಿಜಯ ಪತಾಕೆ ಹಾರಿಸಿದೆ. 90 ವಿಧಾನಸಭಾ ಕ್ಷೇತ್ರಗಳಿರು ಛತ್ತೀಸ್‌ಗಢದಲ್ಲಿ ಸರ್ಕಾರ ರಚನೆಗೆ ಕನಿಷ್ಠ 46 ಸ್ಥಾನ ಬೇಕಾದರೆ ಬಿಜೆಪಿ 54 ಸ್ಥಾನ ಗೆದ್ದಿದೆ‌. ಕಾಂಗ್ರೆಸ್ 35 ಸ್ಥಾನಕ್ಕೆ ಕುಸಿತ ಕಂಡಿದೆ.

- Advertisement -

ಇದೀಗ ಛತ್ತೀಸ್‌ಗಢ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ಕುತೂಹಲ ಸೃಷ್ಟಿಯಾಗಿದ್ದು, ಬುಡಕಟ್ಟು ಜನಾಂಗದ ವ್ಯಕ್ತಿ ಸಿಎಂ ಕುರ್ಚಿಯಲ್ಲಿ ಕೂರುವ ಸಾಧ್ಯತೆ ದಟ್ಟವಾಗಿದೆ. ರೇಸ್‌ನಲ್ಲಿ ಕೆಲ ಪ್ರಮುಖ ಹೆಸರುಗಳು ಕೇಳಿಬರುತ್ತಿದ್ದು, ಬುಡಕಟ್ಟು ಸಮುದಾಯದ ವಿಷ್ಣು ದಿಯೋ ಸಾಯಿ ಹೆಸರು ಮುಂಚೂಣಿಯಲ್ಲಿದೆ.

ಛತ್ತೀಸ್‌ಗಢದಲ್ಲಿ ಬುಡಕಟ್ಟು ಸಮುದಾಯದ ಮತಗಳು ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದು, 2024ರ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಬಿಜೆಪಿ ಬುಡಕಟ್ಟು ಸಮುದಾಯದ ಪ್ರಬಲ ನಾಯಕ ವಿಷ್ಣು ದಿಯೋ ಸಾಯಿಯನ್ನು ಮತ್ತೆ ಸಿಎಂ ಮಾಡಬಹುದೆಂದು ಅಂದಾಜಿಸಲಾಗಿದೆ. ಈ ಹಿಂದೆ ಅವರು ಛತ್ತಿಸಗಢದ ಸಿಎಂ ಆಗಿದ್ದರು. ಕೇಂದ್ರದ ಸಚಿವ‌ ಕೂಡ ಆಗಿದ್ದರು.

- Advertisement -

ಇದರ ಜೊತೆಗೆ ಈ ಬಾರಿ ಮಹಿಳಾ ಸಿಎಂ ಅನ್ನೋ ಮಾತುಗಳು ಕೇಳಿಬರುತ್ತಿದ್ದು, ಹಾಗಾದರೆ ರೇಣುಕಾ ಸಿಂಗ್ ಹೆಸರು ಮುಂಚೂಣಿಯಲ್ಲಿದೆ. ರೇಣುಕಾ ಸಿಂಗ್ ಕೂಡ ಬುಡಕಟ್ಟು ಸಮುದಾಯದ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ.

ಇವರಿಬ್ಬರು ಅಲ್ಲದೆ, ಛತ್ತೀಸಗಢದ ಮಾಜಿ ಸಿಎಂ ಹಾಗೂ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ರಮಣ್ ಸಿಂಗ್ ಕೂಡ ಸಿಎಂ ರೇಸ್‌ನಲ್ಲಿ ಕಾಣಿಸಿಕೊಂಡಿದೆ. ಅವರು1999ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಕೇಂದ್ರದ ರಾಜ್ಯ ಖಾತೆ ಸಚಿವ ರಾಗಿದ್ದರು.

ಕಾಂಗ್ರೆಸ್ ಮಾಡಿದ ಒಬಿಸಿ ಆರೋಪಕ್ಕೆ ಪ್ರತ್ಯುತ್ತರ ನೀಡಲು ಒಬಿಸಿ ಸಮುದಾಯದಿಂದ ಸಿಎಂ ಆಯ್ಕೆ ಮಾಡೋದಾದರೆ ಅರುಣ್ ಸಾವೋ ಸಿಎಂ ಆಗೋ ಚಾನ್ಸಿದೆ.

Join Whatsapp