ಭೋಪಾಲ್ ಅನಿಲ ದುರಂತದ ಸಂತ್ರಸ್ತರಿಗೆ ಹೆಚ್ಚುವರಿ ಪರಿಹಾರ: ಕೇಂದ್ರದ ಕ್ಯುರೇಟಿವ್ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್

Prasthutha|

ನವದೆಹಲಿ: ಭೋಪಾಲ್ ಅನಿಲ ದುರಂತದ ಸಂತ್ರಸ್ತರಿಗೆ ಹೆಚ್ಚುವರಿಯಾಗಿ ರೂ. 7,844 ಕೋಟಿ ಪರಿಹಾರವನ್ನು ಯೂನಿಯನ್ ಕಾರ್ಬೈಡ್’ನ ಉತ್ತರಾಧಿಕಾರಿ ಸಂಸ್ಥೆಗಳಿಂದ ಕೊಡಿಸಲು ಕೇಳಿ ಕೇಂದ್ರ ಸರ್ಕಾರವು ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಜಾಗೊಳಿಸಿದೆ.

- Advertisement -


ನ್ಯಾಯಮೂರ್ತಿ ಎಸ್.ಕೆ.ಕೌಲ್ ನೇತೃತ್ವದ ಸುಪ್ರೀಂ ಕೋರ್ಟ್’ನ ಸಾಂವಿಧಾನಿಕ ಪೀಠವು ಮಂಗಳವಾರ, ಸಂತ್ರಸ್ತರಿಗೆ ನೀಡಲಾದ 470 ಮಿಲಿಯನ್ ಡಾಲರ್ (ಅಂದಿನ ವಿನಿಮಯ ದರದಲ್ಲಿ ಸುಮಾರು 725 ಕೋಟಿ ರೂ.) ಪರಿಹಾರವನ್ನು ಹೆಚ್ಚಿಸಲು ಕೇಂದ್ರ ಸರ್ಕಾರದ ಕ್ಯುರೇಟಿವ್ ಅರ್ಜಿಯನ್ನು ವಜಾಗೊಳಿಸಿತು.


ಈಗ ಡೌ ಕೆಮಿಕಲ್ಸ್’ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಯೂನಿಯನ್ ಕಾರ್ಬೈಡ್ ಕಾರ್ಪೊರೇಷನ್ (ಯುಸಿಸಿ) ಯೊಂದಿಗೆ 1989 ರಲ್ಲಿ ಮಾಡಿಕೊಂಡ ಒಪ್ಪಂದದಲ್ಲಿ ಪರಿಹಾರವನ್ನು ನಿಗದಿಪಡಿಸಲಾಯಿತು. ಕೀಟನಾಶಕ ಕಂಪನಿಯಿಂದ ಸರ್ಕಾರ ಹೆಚ್ಚುವರಿ ಹಣವನ್ನು ಕೋರಿತ್ತು. ಯುಸಿಸಿ “ಹೆಚ್ಚಿನ ಪರಿಹಾರ ಪಾವತಿಸಲು ನಿರಾಕರಿಸಿತ್ತು.

Join Whatsapp