ಡ್ರಗ್ಸ್ ಪ್ರಕರಣದಲ್ಲಿ ನನ್ನನ್ನು ಸಿಲುಕಿಸಲಾಗಿದೆ: ನ್ಯಾಯಾಲಯದಲ್ಲಿ ಆರ್ಯನ್ ಖಾನ್ ಹೇಳಿಕೆ

Prasthutha|

ಮುಂಬೈ: ಡ್ರಗ್ಸ್ ಪ್ರಕರಣದಲ್ಲಿ ನನ್ನ ವಿರುದ್ಧ ಷಡ್ಯಂತ್ರ ರೂಪಿಸಿ ಸಿಲುಕಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಆರ್ಯನ್ ಖಾನ್ ನ್ಯಾಯಾಲಯದಲ್ಲಿ ತನ್ನ ಅಳಲನ್ನು ತೋಡಿಕೊಂಡಿದ್ದಾರೆ.

- Advertisement -

ಇತ್ತೀಚೆಗೆ ಕ್ರೂಸ್ ಹಡಗಿನಲ್ಲಿ ಎನ್.ಸಿ.ಬಿ ನಡೆಸಿದ ದಾಳಿಯ ವೇಳೆ ಬಾಲಿವುಡ್ ನಟ ಆರ್ಯನ್ ಸೇರಿದಂತೆ ಮೂವರನ್ನು ಬಂಧಿಸಲಾಗಿತ್ತು.

ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾದ ಆರ್ಯನ್ ಜಾಮೀನು ಕೋರಿ ಮುಂಬೈ ಹೈಕೋರ್ಟ್ ಗೆ ಸಲ್ಲಿಸಿರುವ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯದಲ್ಲಿ ಗದ್ಗರಿತರಾಗಿದ್ದರು. ಮಾತ್ರವಲ್ಲ ಈ ಹಿಂದೆ 2 ಸಲ ಜಾಮೀನು ನಿರಾಕರಿಸಿತ್ತು.

- Advertisement -

ಆರ್ಯನ್ ನಡೆಸಿದ ವಾಟ್ಸಾಪ್ ಚಾಟ್ ಲಿಸ್ಟ್ ಆಧಾರದಲ್ಲಿ ಜಾಮೀನು ಅರ್ಜಿಯನ್ನು ತಿರಸ್ಕರಿಸಲಾಗುತ್ತಿದೆ ನ್ಯಾಯಾಲಯ ತಿಳಿಸಿತ್ತು.

ಈ ಮಧ್ಯೆ ಎನ್.ಸಿ.ಬಿ ತನ್ನ ವಾಟ್ಸಾಪ್ ಚಾಟ್ ಗಳನ್ನು ತಪ್ಪಾಗಿ ಅರ್ಥೈಸಿದೆ ಎಂದು ಆರ್ಯನ್ ಹೇಳಿದ್ದಾರೆ. ಪ್ರಸ್ತುತ ಜೈಲಿನಲ್ಲಿರುವ ಆರ್ಯನ್ ಖಾನ್ ಜಾಮೀನು ಅರ್ಜಿಯ ಮುಂದಿನ ವಿಚಾರಣೆ ವಿಶೇಷ ನ್ಯಾಯಾಲಯ ಆಕ್ಟೋಬರ್ 26 ಕ್ಕೆ ನಡೆಸಲಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾದಕದ್ರವ್ಯ ವಿರೋಧಿ ಏಜೆನ್ಸಿ ಇದುವರೆಗೆ 20 ಜನರನ್ನು ಬಂಧಿಸಿದೆ.

Join Whatsapp