ಇಸ್ಲಾಮ್ ಸ್ವೀಕರಿಸಿದ ಅಮೆರಿಕದ ಖ್ಯಾತ ಕೆಥೋಲಿಕ್ ಧರ್ಮಗುರು

Prasthutha|


ವಾಷಿಂಗ್ಟನ್: ಅಮೆರಿಕದ ಖ್ಯಾತ ಕೆಥೋಲಿಕ್ ಧರ್ಮ ಗುರು ಹಿಲಾರಿಯನ್ ಹೇಗಿ ಅವರು ಇಸ್ಲಾಮ್ ಧರ್ಮ ಸ್ವೀಕರಿಸಿದ್ದಾರೆ.
ಅದನ್ನು ಅವರು ಮತಾಂತರ ಎಂದು ಕರೆಯದೆ, ಇಸ್ಲಾಂ ಎಂಬ ನನ್ನ ಮೂಲ ಮನೆಗೆ ಹಿಂದಿರುಗುವಿಕೆ ಎಂದು ವ್ಯಾಖ್ಯಾನಿಸಿದ್ದಾರೆ.

- Advertisement -


ರಷ್ಯನ್ ಕೆಥೋಲಿಕ್ ಮೂಲದ ಈ ಫಾದರ್ ಕ್ಯಾಲಿಫೋರ್ನಿಯಾ ನಿವಾಸಿ. 2003ರಲ್ಲಿ ಆಂಟಿಯೋಚಿಯನ್ ಆರ್ಥೊಡೆಕ್ಸ್ ಚರ್ಚ್ ಸೇರಿದ ಅವರು 2007ರಲ್ಲಿ ಈಸ್ಟರ್ನ್ ಕೆಥೋಲಿಕ್ ಚರ್ಚ್ ಸೇರ್ಪಡೆಯಾಗಿದ್ದರು.


ಬೈಜೆಯಿಂಟಿಯನ್ ಕೆಥೋಲಿಕ್ ಧರ್ಮ ಗುರು ಆಗಲು ಅವರು ವಿಸ್ಕಾನ್ಸಿನ್’ನ ಸೈಂಟ್ ನಜಿಯಾಂಜ್’ನ ಹೋಲಿ ರಿಸರಕ್ಷನ್ ಮಾನೆಸ್ಟರಿಯಲ್ಲಿ ಪದವಿ ಪಡೆದರು. ಇತ್ತೀಚೆಗೆ ಅವರು ಕ್ಯಾಲಿಫೋರ್ನಿಯಾದಲ್ಲಿ ಈಸ್ಟರ್ನ್ ಕ್ರಿಶ್ಚಿಯನ್ ಮಾನೆಸ್ಟರಿ ಸ್ಥಾಪಿಸುವುದಾಗಿ ಹೇಳಿದ್ದರು.

- Advertisement -


ಆದರೆ ಹೇಗಿಯವರು ತಾನು ಅಬ್ದುಲ್ ಲತೀಫ್ ಆಗಿ ಬದಲಾಗಿರುವುದಾಗಿ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ದಶಕದಿಂದ ಇಸ್ಲಾಮಿಗೆ ಹೋಗಲು ಯೋಜಿಸುತ್ತಿದ್ದೆ, ಈಗ ಜಿಗಿದಿದ್ದೇನೆ ಎಂದು ಬರೆದುಕೊಂಡಿದ್ದಾರೆ.


“ನಾನು ಕೆಥೋಲಿಕ್ ಮಾನೆಸ್ಟರಿಯಲ್ಲಿ ವಾಸಿಸುತ್ತಿದ್ದುದರಿಂದ ದೈಹಿಕ ಬದಲಾವಣೆ ಆಗಲೇ ಬೇಕಿತ್ತು. ಒಬ್ಬರು ಸಾರ್ವಜನಿಕವಾಗಿ ಕ್ರಿಶ್ಚಿಯನ್ ಫಾದರ್ ಆಗುವುದು ಸಾಧ್ಯವಿಲ್ಲ, ಹಾಗೆಯೇ ಒಬ್ಬರು ಖಾಸಗಿಯಾಗಿ ಮುಸ್ಲಿಂ ಆಗುವುದು ಸಾಧ್ಯವಿಲ್ಲ” ಎಂದು ಹೇಗಿ ಹೇಳಿದ್ದಾರೆ.


ಇದು ಪೂರ್ವಕ್ಕೆ ಮತ್ತು ನನ್ನ ಮೂಲ ಗುರುತಿಗೆ ಹಿಂದಿರುಗುವುದಾಗಿದೆ. ಅದಕ್ಕೆ ಅವರು ಕುರ್’ಆನಿನ ಉದಾಹರಣೆ ನೀಡಿದ್ದಾರೆ.“
“ದೇವರು ನಮ್ಮ ಮೂಲ ಪುರುಷರಾದ ಆದಂ ಮತ್ತು ಅವರ ಸಂತತಿಯನ್ನು ಈ ಭೂಮಿಗೆ ತಂದರು. ಅವರು ಅದನ್ನು ಅರಿಯಲು ಅಲ್ಲಾಹ್ ಪ್ರಶ್ನಿಸಿದರು,
“ನಿಮ್ಮೊಡನೆಯನು ಆದಮ್’ರ ಮಕ್ಕಳ ಮೂಲಕ ಜನಿಸಿದ ಅವರ ಸಂತತಿಗಳನ್ನು, ಸ್ವತಃ ತಮ್ಮ ವಿರುದ್ಧವೇ ಸಾಕ್ಷಿಗಳಾಗಿಸಿ, ನಾನು ನಿಮ್ಮ ಒಡೆಯನಲ್ಲವೇ? ಎಂದು ಕೇಳಿದಾಗ ಅವರು, “ಯಾಕಲ್ಲ? ಅದಕ್ಕೆ ನಾವೇ ಸಾಕ್ಷಿಗಳು” ಎಂದಿದ್ದರು. ನಾಳೆ ಪುನರುತ್ಥಾನ ದಿನ ನೀವು ಈ ಕುರಿತು ನಮಗೇನೂ ತಿಳಿದಿರಲಿಲ್ಲ ಎನ್ನಬಾರದೆಂದು ಹೀಗೆ ಮಾಡಲಾಯಿತು” (ಕುರ್’ಆನ್- 7:172)


“ಆದ್ದರಿಂದ ಇಸ್ಲಾಮಿಗೆ ಹೋಗಿರುವುದನ್ನು ನಾನು ಮತಾಂತರ ಎಂದು ಕರೆಯುವುದಿಲ್ಲ. ಅದು ಇಸ್ಲಾಮಿಗೆ ಹಿಂದಿರುಗುವಿಕೆ ಎಂಬುದು ನಮ್ಮ ನಂಬಿಕೆ. ಹಿಂದಿರುಗುವ ಒಂದು ದೀರ್ಘ ಕಾಲದ ಪ್ರಕ್ರಿಯೆಯಾಗಿದೆ ಎಂದು ಅವರು ಬರೆದಿದ್ದಾರೆ.


ಈ ಬ್ಲಾಗ್ ಅಭಿಪ್ರಾಯದೊಂದಿಗೆ ಕೆಥೋಲಿಕ್ ಕಾಮ್’ನಲ್ಲಿ ಇತ್ತೀಚೆಗೆ ಒಂದು ಲೇಖನ ಪ್ರಕಟಗೊಂಡಿದೆ. ಅದರ ತಲೆಬರಹವು ಮುಸ್ಲಿಂ ಪ್ರೀಸ್ಟ್’ರ ವಿಷಾದದ ಪಯಣ ಎನ್ನುವುದಾಗಿದೆ. ಮಾಜಿ ಫಾದರ್ ಅವರ ಇಸ್ಲಾಂ ಸ್ವೀಕಾರಕ್ಕೆ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

Join Whatsapp