ನನ್ನ ಮೊಬೈಲ್’ನಲ್ಲಿ ಪೆಗಾಸಸ್ ಇದೆ; ಭಾರತದ ಪ್ರಜಾಪ್ರಭುತ್ವ ಅಪಾಯದಲ್ಲಿದೆ: ಕೇಂಬ್ರಿಡ್ಜ್’ನಲ್ಲಿ ರಾಹುಲ್ ಗಾಂಧಿ

Prasthutha|

ಲಂಡನ್: ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಭಾಷಣ ಮಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಭಾರತದ ಪ್ರಜಾಪ್ರಭುತ್ವದ ಮೇಲೆ ಈಗಿನ ಸರಕಾರವು ಮಾರಣಾಂತಿಕ ಹಲ್ಲೆ ನಡೆಸಿದ್ದು, ಪ್ರಜಾಪ್ರಭುತ್ವ ಅಪಾಯದಲ್ಲಿದೆ. ನನ್ನ ಫೋನನ್ನು ಇಸ್ರೇಲಿನ ಪೆಗಾಸಸ್ ಗೂಢಚರ ಸಾಧನಗಳು ಕದ್ದು ಕೇಳುತ್ತವೆ ಎಂದು ಆರೋಪಿಸಿದ್ದಾರೆ.

- Advertisement -

‘ನಿಮ್ಮ ಭಾಷಣ ರೆಕಾರ್ಡ್ ಆಗುತ್ತಿದೆ. ಆದ್ದರಿಂದ ಹುಶಾರಾಗಿ ಮಾತನಾಡಿ’ ಎಂದು ನನ್ನನ್ನು ತನಿಖಾ ದಳದವರು ಎಚ್ಚರಿಸಿದ್ದಾರೆ. ರಾಹುಲ್ ಗಾಂಧಿಯವರು ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಎಂಬಿಎ ವಿದ್ಯಾರ್ಥಿಗಳಿಗೆ ಮಾಡಿದ ಭಾಷಣವನ್ನು ಮನಮೋಹನ್ ಸಿಂಗ್’ರಿಗೆ ಸಲಹೆಗಾರರಾಗಿದ್ದ ಸ್ಯಾಂ ಪಿತ್ರೋಡಾ ಅವರು ಯೂಟ್ಯೂಬ್ ಲಿಂಕ್’ ನಲ್ಲಿ ಹಂಚಿಕೊಂಡಿದ್ದಾರೆ. “ಲರ್ನಿಂಗ್ ಟು ಲಿಸನ್ ಇನ್ ದ 21 ಸೆಂಚುರಿ” ವಿಷಯವಾಗಿ ಕೇಂಬ್ರಿಡ್ಜ್ ನ ಜಡ್ಜ್ ಬಿಜಿನೆಸ್ ಸ್ಕೂಲ್ ನಲ್ಲಿ ಮಾತನಾಡಿದರು.

“ನನ್ನ ಫೋನಿನಲ್ಲೇ ಪೆಗಾಸಸ್ ತೂರಿಸಲಾಗಿದೆ. ಬಹುತೇಕ ರಾಜಕಾರಣಿಗಳ ಮೊಬೈಲ್’ನಲ್ಲಿ ಪೆಗಾಸಸ್ ಇದೆ. ಇಂಟೆಲಿಜೆನ್ಸ್ ಅಧಿಕಾರಿಗಳು ‘ನಿಮ್ಮ ಭಾಷಣವೆಲ್ಲ ರೆಕಾರ್ಡ್ ಆಗುತ್ತಿವೆ. ತುಂಬ ಎಚ್ಚರಿಕೆಯಿಂದ ಮಾತನಾಡಿ’ ಎಂದು ಹೇಳಿದ್ದಾರೆ. ಇದು ಎಲ್ಲ ವಿರೋಧ ಪಕ್ಷದ ನಾಯಕರು ಎದುರಿಸುತ್ತಿರುವ ಅತಿ ದೊಡ್ಡ ಒತ್ತಡವಾಗಿದೆ. ನಾವು ಕ್ರಿಮಿನಲ್ ಅಲ್ಲದಿದ್ದರೂ ಹಲವಾರು ಕ್ರಿಮಿನಲ್ ಮೊಕದ್ದಮೆಗಳನ್ನು ನನ್ನ ಸುತ್ತ ಸುತ್ತಲಾಗುತ್ತಿದೆ. ಹಾಗಾಗಿ ನಾವು ನಮ್ಮನ್ನು ಡಿಫೆಂಡ್ ಮಾಡಿಕೊಳ್ಳಬೇಕಾಗಿದೆ” ಎಂದು ರಾಹುಲ್ ಗಾಂಧಿ ಹೇಳಿದರು.

- Advertisement -

ಗೂಢಚಾರಿಕೆ ಮಾಡಲು ಸರಕಾರವು ಕಾನೂನುಬಾಹಿರವಾಗಿ ಪೆಗಾಸಸ್ ಬಳಸುತ್ತದೆ ಎಂಬುದರ ಸತ್ಯಾಸತ್ಯತೆ ತಿಳಿಯಲು ಕಳೆದ ಆಗಸ್ಟ್ ನಲ್ಲಿ ಸರ್ವೋಚ್ಚ ನ್ಯಾಯಾಲಯವು ಸಮಿತಿಯೊಂದನ್ನು ರಚಿಸಿತ್ತು. ಅವರು ಪರಿಶೀಲಿಸಿದ 29 ಮೊಬೈಲ್ ಫೋನ್ ಗಳಲ್ಲಿ ಗೂಢಚಾರಿಕೆ ಸಾಧನಗಳು ಕಂಡುಬರಲಿಲ್ಲ. ಆದರೆ ಐದು ಫೋನ್ ಗಳಲ್ಲಿ ಮಲಾವೇರ್ ಗಳು ಕಂಡುಬಂದವು.

ಪರೀಕ್ಷೆಗೆ ಕಳುಹಿಸಿದ 29ರಲ್ಲಿ ಐದರಲ್ಲಿ ಕುತಂತ್ರಾಂಶ ಇರುವುದು ಗೊತ್ತಾಗಿದೆ. ತಂತ್ರಜ್ಞರು ಇದು ಪೆಗಾಸಸ್ ಅಲ್ಲ ಎಂದು ಹೇಳಿದ್ದಾರೆ ಎಂದು ನ್ಯಾಯಾಲಯ ಹೇಳಿತು. ಹಾಗಾದರೆ ಆ ಕದ್ದು ಕೇಳುವ ಸಾಧನ ಯಾವುದು ಎಂದು ರಾಹುಲ್ ಗಾಂಧಿಯವರು ವಿದ್ಯಾರ್ಥಿಗಳಲ್ಲಿ ಪ್ರಶ್ನಿಸಿದರು.

Join Whatsapp