ಬೆಂಗಳೂರು: ಪುಟ್‌ಬಾಲ್ ಆಟದ ವೇಳೆ 22 ವರ್ಷದ ಯುವಕನಿಗೆ ಮೊಣಕಾಲಿನಲ್ಲಿರುವ ಇರುವ ಸಿ ಆಕಾರದ ತಟ್ಟೆಯಂತಿರುವ ಮೆನಿಸ್ಕಸ್ ನನ್ನು ಸಂಪೂರ್ಣ ಕಳೆದುಕೊಂಡ ಕಾರಣ, ಅಪರೂಪದ ಮೆನಿಸ್ಕಸ್ ಕಸಿಯನ್ನು ಫೊರ್ಟಿಸ್ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿ ನಡೆಸಿದ್ದಾರೆ. ಅತಿ ಚಿಕ್ಕವಯಸ್ಸಿಗೆ ಮೊಣಕಾಲಿನ ಮೆನಿಸ್ಕಸ್ ಕಳೆದುಕೊಂಡು ಅಪರೂಪದ ಪ್ರಕರಣಗಳಲ್ಲಿ ಇದೂ ಒಂದು.
ಈ ಕುರಿತು ಮಾತನಾಡಿದ ಫೋರ್ಟಿಸ್ ಆಸ್ಪತ್ರೆಯ ಮೂಳೆ ಮತ್ತು ಜಂಟಿ ಬದಲಿ ಶಸ್ತ್ರಚಿಕಿತ್ಸಕ ಡಾ ರಘು ನಾಗರಾಜ್, 22 ವರ್ಷದ ಯುವಕ ಫುಟ್ ಬಾಲ್ ಆಟದ ವೇಳೆ ತನ್ನ ಮೊಣಕಾಲಿನಲ್ಲಿರುವ ಮೆನಿಸ್ಕಸ್ ಸಂಪೂರ್ಣ ಹರಿದು ಹೋಗಿತ್ತು. ಈ ಬಗ್ಗೆ ಅರಿವಿಲ್ಲ ಯುವಕ, ಸ್ವಯಂ ಚಿಕಿತ್ಸೆ ಮಾಡಿಕೊಂಡು ಕ್ರೀಡೆ ಮುಂದುವರೆಸಿದ್ದಾನೆ. ದಿನಕಳೆದಂತೆ ಮೊಣಕಾಲಿನಲ್ಲಿ ಅಸಾಧ್ಯ ನೋವು ಕಾಣಿಸಿಕೊಂಡ ಬಳಿಕ ಆಸ್ಪತ್ರೆಗೆ ದಾಖಲಾಗಿದ್ದಾನೆ. ಸ್ಯಾನಿಂಗ್ ಬಳಿಕ ಈ ಯುವಕ ಮೊಣಕಾಲಿನಲ್ಲಿ ಮೂಳೆಗಳ ಮಧ್ಯೆ ಕಂಡು ಬರುವ ತಟ್ಟೆಯಾಕಾರದ ಮೆನಿಸ್ಕಸ್ ಟಿಯರ್ ನನ್ನು ಸಂಪೂರ್ಣ ಕಳೆದುಕೊಂಡಿದ್ದ. ಅತಿ ಚಿಕ್ಕ ವಯಸ್ಸಾದ್ದರಿಂದ ಯುವಕರನಿಗೆ ಮೊಣಕಾಲಿನ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಿತ್ತು.
ಒಂದು ಬಾರಿ ಈ ಟಿಶ್ಯೂ ಆಕಾರದ ಮೆನಿಸ್ಕಸ್ ಕಳೆದುಕೊಂಡರೆ ಮೊಣಕಾಲು ಎಂದಿನಂತೆ ಕಾರ್ಯ ನಿರ್ವಹಿಸುವುದಿಲ್ಲ. ನಡೆಯಲು ಸಹ ಆಗದೆ ಅಸಾಧ್ಯ ನೋವು ಕಾಣುತ್ತದೆ. ಹೀಗಾಗಿ ಮೆನಿಸ್ಕಸ್ ನ ಕಸಿ ಮಾಡುವುದು ಅನಿವಾರ್ಯವಾಗಿ ಕಂಡು ಬಂತು. ಈ ಮೆನಿಸ್ಕಸ್ ದಾನಿಗಳು ಸಹ ತೀರ ಕಡಿಮೆ. ಈ ದೇಶದಲ್ಲಿ ಮೆನಿಸ್ಕಸ್ ಲಭ್ಯವಾಗದ ಕಾರಣ ಯುಎಸ್ ನಿಂದ ಆಮದು ಮಾಡಿಕೊಂಡು ಈ ಯುವಕನಿಗೆ ಯಶಸ್ವಿ ಕಸಿ ಮಾಡಲಾಯಿತು. ಒಂದು ವೇಳೆ ಈ ಕಸಿ ಮಾಡದಿದ್ದರೆ ತೀವ್ರವಾದ ಅಸ್ಥಿಸಂಧಿವಾತವನ್ನು ಈ ಯುವ ಭವಿಷ್ಯದಲ್ಲಿ ಅನುಭವಿಸಬೇಕಾಗುತ್ತಿತ್ತು.
ಮೊಣಕಾಲಿನಲ್ಲಿ ಇರುವ ಮೆನಿಸ್ಕಸ್ ಟಿಶ್ಯ ಹರಿದು ಹೋಗುವ ಸಮಸ್ಯೆ ಹೆಚ್ಚಾಗಿ ಪುಟ್ ಬಾಲ್ ಆಟಗಾರಲಲ್ಲಿ ಕಂಡು ಬರುತ್ತದೆ. ಈ ಸಮಸ್ಯೆ ಮೇಲ್ನೋಟಕ್ಕೆ ಕಾಣಿಸದೇ ಇರುವುದರಿಂದ ಕಾಲಿನಲ್ಲಿ ಕಂಡು ಬರುವ ನೋವನ್ನು ನಿವಾರಿಸಿಕೊಳ್ಳಲು ಸ್ವಯಂ ಚಿಕಿತ್ಸೆ ಮಾಡಿಕೊಳ್ಳುತ್ತಾರೆ. ಇದು ಅತ್ಯಂತ ಅಪಾಯಕಾರಿ. ಮೊಣಕಾಲಿನಲ್ಲಿ ನೋವು ಕಂಡು ಬಂದರೆ ಕೂಡಲೇ ವೈದ್ಯರನ್ನು ಭೇಟಿ ಮಾಡುವುದು ಉತ್ತಮ ಎಂದು ಹೇಳಿದರು.