ಬೆಂಗಳೂರು: ಪ್ರಸ್ತುತ ನವಭಾರತ ವರ್ಷಕ್ಕೆ ಶೇ.13.5ರಷ್ಟು ಪ್ರತಿಶತದಂತೆ ವೇಗವಾಗಿ ಬೆಳೆಯುತ್ತಿದೆ ಎಂದು ಕೇಂದ್ರ ರಾಜೀವ್ ಚಂದ್ರಶೇಖರ್ ಹೇಳಿದರು.
ಬೆಂಗಳೂರಿನ ಹೊಸಕೆರೆಹಳ್ಳಿಯಲ್ಲಿರುವ ಪಿಇಎಸ್ ವಿಶ್ವವಿದ್ಯಾಲಯ ಆವರಣದಲ್ಲಿ ನಡೆದ 7ನೇ ವಾರ್ಷಿಕ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ಬಾರಿ ತೆರಿಗೆಯಿಂದ ಶೇ.25ರಷ್ಟು ಹೆಚ್ಚು ಹಣ ಸಂಗ್ರಹ ಮಾಡಲಾಗಿದೆ.ಇದರಿಂದ 10 ಲಕ್ಷ ಕೋಟಿ ರೂಪಾಯಿಯಷ್ಟು ಮೂಲಭೂತ ಸೌಕರ್ಯಗಳನ್ನು ಒದಗಿಸಲು ಉಪಯೋಗಿಸಲಾಗುವುದು ಎಂದು ತಿಳಿಸಿದರು.
ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ ಅವರು, ಹೊಸ ಜೀವನಕ್ಕೆ ಕಾಲಿಡುತ್ತಿರುವ ವಿದ್ಯಾರ್ಥಿಗಳು ಇನ್ನೂ ಮುಂದೆ ಹೊಸ ಸವಾಲುಗಳನ್ನು ಎದುರಿಸಬೇಕಿದೆ.
ಕೋವಿಡ್ ಸಂದರ್ಭದಲ್ಲಿ ಅಧ್ಯಯನ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಎಷ್ಟು ಕಷ್ಟವಾಗಿತ್ತು ಅಂತ ನನಗೂ ಅರಿವಾಗಿದೆ ಅವೆಲ್ಲವನ್ನೂ ಮೆಟ್ಟಿ ನಿಂತು ಹೊಸ ಭಾರತದ ಜನರೇಶನ್ ಆಗಿ ಹೊರಹೊಮ್ಮಿದ್ದೀರಾ, ಭಾರತದ ಹೊಸ ರೂಪವನ್ನು ನೀವು ನೋಡ್ತಿದ್ದೀರಾ, ಯಾರ ಮೇಲೂ ಅವಲಂಭಿತರಾಗದೇ ಏನು ಬೇಕಾದರೂ ಸಾಧಿಸಬಹುದಾದ ಯುಗದಲ್ಲಿ ನಾವಿದ್ದೇವೆ. ನಮ್ಮ ದೇಶವನ್ನು dysfunctional democracy ಅಂತೆ ಕಾಣಲಾಗುತ್ತಿತು. ಪ್ರಸ್ತುತ ನ್ಯೂ ಇಂಡಿಯಾ ನಿಮ್ಮಂತಹ ಯುವಕರಿಂದ ಭಾರತ ವರ್ಷಕ್ಕೆ ಶೇ. 13.5ರಷ್ಟು ವೇಗವಾಗಿ ಬೆಳೆಯುತ್ತಿದೆ ಎಂದರು.
ಕಳೆದ ಒಂದು ವಾರದಲ್ಲಿ ಬೆಂಗಳೂರಿನಲ್ಲಿ ಧಾರಾಕಾರ ಮಳೆ ಸುರಿಯುತ್ತದೆ. 90 ವರ್ಷಗಳ ನಂತರ ಅತ್ಯಧಿಕ ಮಳೆಯಿಂದ ಸಮಸ್ಯೆ ಆಗಿದೆ 2 ವಲಯಗಳಲ್ಲಿ ಅತಿ ಹೆಚ್ಚು ಮಳೆಯಾಗಿದೆ.
ಕಳೆದ 10ರಿಂದ 15 ವರ್ಷಗಳಲ್ಲಿ ಬಿಲ್ಡರ್ಗಳು ಕಾನೂನು ಉಲ್ಲಂಘನೆ ಮಾಡಿರುವುದು ಮಳೆಯಿಂದ ಉಂಟಾಗಿರುವ ಸಮಸ್ಯೆಗಳಿಗೆ ಪ್ರಮುಖ ಕಾರಣವಾಗಿದೆ ಎಂದು ತಿಳಿಸಿದರು.
ಹೊಸ ಬೆಂಗಳೂರಿಗೆ ಮ್ಯಾಪ್ ಹಾಗೂ ಬ್ಲೂ ಪ್ರಿಂಟ್ ಸಿದ್ದವಾಗುತ್ತಿದೆ ಬೆಂಗಳೂರು ಒಂದೇ ಐಟಿ ಹಬ್ ಸಿಟಿ ಆಗಬಾರದು, ಐಟಿಬಿಟಿ ಕಂಪನಿಗಳು ಬೆಂಗಳೂರು ಬಿಟ್ಟು ಹೋಗದಂತೆ ಸಚಿವನಾಗಿ ಖುದ್ದು ನಾನೇ ಮನವಿ ಮಾಡುತ್ತೇನೆ. ನಾನೂ ಕೂಡ ಬೆಂಗಳೂರಿನ ನಿವಾಸಿಯೇ ಆಗಿರುವುದರಿಂದದ ಜನಸಾಮಾನ್ಯರ ಸಮಸ್ಯೆಗಳು ನನ್ನ ಸಮಸ್ಯೆಗಳೆ ಆಗಿವೆ ಎಂದರು.
ಎರಡನೇ ಹಂತ ಹಾಗು ಮೂರನೇ ಹಂತದ ನಗರಗಳಲ್ಲಿ ಐಟಿ ಪಾರ್ಕ್ ನಿರ್ಮಾಣವಾಗಬೇಕು, ಮೈಸೂರು, ಹುಬ್ಬಳ್ಳಿ, ಧಾರವಾಡ, ಮಂಗಳೂರಿನಂತಹ ನಗರಗಳಲ್ಲೂ ಐಟಿ ಹಬ್ ತಲೆಯೆತ್ತಬೇಕು ಎಂದು ಹೇಳಿದರು.
ರಾಜಕಾರಿಣಿಗಳೆ ಒತ್ತುವರಿಯಲ್ಲಿ ಶಾಮೀಲು ವಿಚಾರದಲ್ಲಿ ಯಾರೇ ತಪ್ಪು ಮಾಡಿದರೂ ಸರಿ ಪಡಿಸಬೇಕು ನೂತನ ಬೆಂಗಳೂರನ್ನು ಸಿದ್ದಪಡಿಸಲು ನಾವೇ ಮುತುವರ್ಜಿ ವಹಿಸಬೇಕು , ಸ್ಟಾರ್ಟ್ ಅಪ್, ಟೆಕ್ ಪಾರ್ಕ್ ಗೆ ಬೆಂಗಳೂರು ಆರಾಮದಾಯಕ ಜಾಗವಾಗಿದೆ ಎಂದು ತಿಳಿಸಿದರು.
ಪಿಇಎಸ್ ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರೊ.ಎಂ.ಆರ್. ದೊರೆಸ್ವಾಮಿ ಮಾತನಾಡಿ, ಕೇವಲ 40 ವಿದ್ಯಾರ್ಥಿಗಳಿಂದ ಬಾಡಿಗೆ ಕೊಠಡಿಯಲ್ಲಿ ಆರಂಭವಾದ ಸಂಸ್ಥೆ ಇಂದು ಬರೊಬ್ಬರಿ 22 ಸಾವಿರ ವಿದ್ಯಾರ್ಥಿಗಳನ್ನು ಪಿಇಎಸ್ ಕಾಲೇಜು ಹೊಂದಿದೆ. ಘಟಿಕೋತ್ಸವದಲ್ಲಿ ವಿಶ್ವವಿದ್ಯಾಲಯದ ಸುಮಾರು 3495 ವಿದ್ಯಾರ್ಥಿಗಳಿಗೆ ಪದವಿ ಹಾಗೂ ಪಿಹೆಚ್ ಡಿ ಪ್ರದಾನ ಮಾಡಲಾಗಿದೆ ಎಂದು ತಿಳಿಸಿದರು.