ಚಿಕ್ಕಮಗಳೂರು: ಅಪಘಾತಕ್ಕೀಡಾದ ಹಸುವನ್ನು ರಕ್ಷಿಸಿದ ಹೃದಯವಂತ ನಾಗರಿಕರು

Prasthutha|

ಚಿಕ್ಕಮಗಳೂರು: ರಸ್ತೆ ಬದಿ ಅಪಘಾತಕ್ಕೀಡಾಗಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಹಸುವನ್ನು ಪಶು ವೈದ್ಯರ ಸಹಕಾರದೊಂದಿಗೆ ಸ್ಥಳೀಯರು ರಕ್ಷಿಸಿದ ಘಟನೆ ಚಿಕ್ಕಮಗಳೂರು ತಾಲೂಕಿನ ಕಣತಿ ಬಳಿ ನಡೆದಿದೆ.

- Advertisement -

ಚಿಕ್ಕಮಗಳೂರು-ಬಾಳೆಹೊನ್ನೂರು ಮಾರ್ಗದ ಕಣತಿ ಬಳಿ ವಾಹನ ಸವಾರರು ಹಸುವಿನ ಮೇಲೆ ವಾಹನ ಚಲಾಯಿಸಿ ಹೋಗಿದ್ದರು.‌ ಹೃದಯ ಭಾಗಕ್ಕೆ ಬಲವಾದ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವದಿಂದ ನರಳಾಡುತ್ತಿದ್ದ ಹಸುವನ್ನು ಕಂಡು ಅದು ಬದುಕುವುದಿಲ್ಲ ಎಂದು  ವೈದ್ಯರೇ ಹೇಳಿದ್ದರು. ಆದರೆ ಸ್ಥಳೀಯರು ತೀವ್ರ  ಶುಶ್ರೂಷೆ ಮಾಡುವ ಮೂಲಕ ಹಸುವಿನ ಪ್ರಾಣವುಳಿಸಿದ್ದಾರೆ.

 ನೋವಿನಿಂದ ನರಳುತ್ತಿದ್ದ ಹಸುವನ್ನು ಕಂಡ ಕೂಡಲೇ ಸ್ಥಳಿಯರು ಪಶು ವೈದ್ಯರನ್ನು ಸ್ಥಳಕ್ಕೆ ಕರೆಸಿ ಹಸುವಿಗೆ ಚಿಕಿತ್ಸೆ ನೀಡಿದ್ದಾರೆ. ಏಟು ಬಿದ್ದ ಜಾಗಕ್ಕೆ ಹೊಲಿಗೆ ಹಾಕಿ ಡ್ರಿಪ್ ಹಾಕಿದ್ದಾರೆ. ಆದರೆ, ಹಸು ಉಳಿಯುವುದು ಕಷ್ಟ, 9 ಗಂಟೆ ಉಳಿದರೆ ಬದುಕುತ್ತದೆ ಇಲ್ಲವಾದರೆ ಉಳಿಯುವುದಿಲ್ಲ ಎಂದು ಹೇಳಿದ್ದಾರೆ. ಸ್ಥಳಿಯರು ನಮ್ಮ ಪ್ರಯತ್ನ ಮಾಡೋಣ ಎಂದು ಚಿಕಿತ್ಸೆ ಬಳಿಕ ಹಸುವನ್ನ ಆಟೋದಲ್ಲಿ ಮನೆಗೆ ಕರೆದುಕೊಂಡು ಹೋಗಿ ಬಿಟ್ಟಿದ್ದಾರೆ. ಆದರೆ, ವೈದ್ಯರು ಹೇಳಿದ 9 ಗಂಟೆ ಬಳಿಕ ಹಸು ಎದ್ದು ಓಡಾಡುತ್ತಿದ್ದು ಬದುಕುಳಿದಿದೆ. ಹಸುವನ್ನ ಉಳಿಸಲು ಹೋರಾಡಿದವರಿಗೆ ಖುಷಿಯಾಗಿದೆ‌.



Join Whatsapp