ಮದರಸಾಗಳಲ್ಲಿ ಬುಲ್ಡೋಜರ್ ಡ್ರೈವ್ ನಿಲ್ಲಿಸಿ, ಅಗತ್ಯವಿದ್ದರೆ ಸುಪ್ರೀಂ ಕೋರ್ಟ್ ಮೊರೆ ಹೋಗುತ್ತೇವೆ: ಎಐಯುಡಿಎಫ್ ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್

Prasthutha|

ಗುವಾಹಟಿ: ಅಸ್ಸಾಮಿನ ಬಿಜೆಪಿ ಸರ್ಕಾರವು ಮದರಸಾಗಳ ವಿರುದ್ಧದ ಬುಲ್ಡೋಜರ್ ಡ್ರೈವ್ ಅನ್ನು ನಿಲ್ಲಿಸಬೇಕು ಎಂದು ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಎಐಯುಡಿಎಫ್) ಮುಖ್ಯಸ್ಥ ಮತ್ತು ಸಂಸದ ಬದ್ರುದ್ದೀನ್ ಅಜ್ಮಲ್ ಹೇಳಿದ್ದಾರೆ.

- Advertisement -

“ರಾಜ್ಯದಲ್ಲಿ ಮದರಸಾಗಳ ವಿರುದ್ಧ ಅಸ್ಸಾಂ ಸರ್ಕಾರದ ಬುಲ್ಡೋಜರ್ ಡ್ರೈವ್ ಅನ್ನು ನಾವು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಅದನ್ನು ನಿಲ್ಲಿಸಬೇಕು. ಅಗತ್ಯಬಿದ್ದರೆ ನಾವು ಸುಪ್ರೀಂ ಕೋರ್ಟ್ ಮೊರೆ ಹೋಗುತ್ತೇವೆ” ಎಂದು ಅಜ್ಮಲ್ ಎಚ್ಚರಿಸಿದರು.

“ಮುಸ್ಲಿಂ ಸಮುದಾಯದಲ್ಲಿ ಕೆಲವು ಸಮಾಜಘಾತುಕ ಜನರು ಇರಬಹುದು. ಸರ್ಕಾರವು ಅಂತಹವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಅದರ ಬಗ್ಗೆ ನಮಗೆ ಯಾವುದೇ ಸಮಸ್ಯೆ ಇಲ್ಲ. ಆದರೆ ಮದ್ರಸಾದಲ್ಲಿ ನೆಲಸಮಗೊಳಿಸುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇದು ಬಿಜೆಪಿ – ಆರೆಸ್ಸೆಸ್ಸ್ ಹಿಂದೂ ರಾಷ್ಟ್ರ ಮಾಡಲು ಮುಸ್ಲಿಮರನ್ನು ಗುರಿಯಾಗಿಸುತ್ತಿದೆ ಎಂದು ಅಜ್ಮಲ್  ಆರೋಪಿಸಿದರು.

Join Whatsapp