ಪಂಜಾಬ್ ನಲ್ಲಿ ಚರ್ಚ್ ಧ್ವಂಸ, ಪಾದ್ರಿಯ ವಾಹನಕ್ಕೆ ಬೆಂಕಿ

Prasthutha|

ಚಂಡೀಗಢ: ಜನರ ಗುಂಪೊಂದು ಬಲವಂತವಾಗಿ ಚರ್ಚ್ ಗೆ ನುಗ್ಗಿ ಏಸು ಕ್ರಿಸ್ತರ ಪ್ರತಿಮೆಗಳನ್ನು ಧ್ವಂಸಗೊಳಿಸಿದಲ್ಲದೆ, ಪಾದ್ರಿಯ ವಾಹನಕ್ಕೂ ಬೆಂಕಿ ಹಚ್ಚಿರುವ ಘಟನೆ ಕಳೆದ ರಾತ್ರಿ ಪಂಜಾಬ್ ನ ತಾರ್ನ್ ತರಣ್ ಪ್ರದೇಶದಲ್ಲಿ ನಡೆದಿದೆ.

- Advertisement -

ಕ್ರಿಶ್ಚಿಯನ್ ಮಿಷನರಿಗಳ ಬಲವಂತದ ಮತಾಂತರದ ವಿರುದ್ಧ ಸಿಖ್ಖರ ಅತ್ಯುನ್ನತ ತಾತ್ಕಾಲಿಕ ಪೀಠದ ಮುಖ್ಯಸ್ಥ ಅಕಾಲ್ ತಖ್ತ್ ಜತೇದಾರ್ ಹೇಳಿಕೆ ನೀಡಿದ ಬೆನ್ನಲ್ಲೇ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

ಕ್ರಿಶ್ಚಿಯನ್ ಮಿಷನರಿಗಳು ಸಿಖ್ಖರನ್ನು ಬಲವಂತವಾಗಿ ಮತಾಂತರಿಸುತ್ತಿದ್ದಾರೆ. ಪಂಜಾಬಿನ ಸಿಖ್ಖರು ಮತ್ತು ಹಿಂದೂಗಳನ್ನು ದಾರಿತಪ್ಪಿಸಿ ಮತಾಂತರ ಮಾಡಲಾಗುತ್ತಿದೆ. ಇದು ಸರ್ಕಾರದ ಮೂಗಿನ ಕೆಳಗೆ ನಡೆಯುತ್ತಿದೆ. ಧರ್ಮದ ಹೆಸರಿನಲ್ಲಿ ಮೂಢನಂಬಿಕೆ ಆಚರಣೆಗಳಿಗಾಗಿ ಪ್ರಕರಣ ದಾಖಲಿಸಲು ಕಾನೂನಿನಲ್ಲಿ ನಿಬಂಧನೆಗಳಿದ್ದರೂ, ವೋಟ್ ಬ್ಯಾಂಕ್ ರಾಜಕೀಯದಿಂದಾಗಿ ಅವರ (ಮಿಷನರಿಗಳು) ವಿರುದ್ಧ ಕ್ರಮ ಕೈಗೊಳ್ಳಲು ಯಾವುದೇ ಸರ್ಕಾರ ಸಿದ್ಧವಿಲ್ಲ” ಎಂದು ಗ್ಯಾನಿ ಹರ್ಪ್ರೀತ್ ಸಿಂಗ್ ಮಂಗಳವಾರ ಫೇಸ್ ಬುಕ್ ಲೈವ್ ವೀಡಿಯೊ ಹೇಳಿಕೆಯಲ್ಲಿ ತಿಳಿಸಿದ್ದರು.

- Advertisement -

ಆ ಹೇಳಿಕೆಯನ್ನು ಪರಿಗಣಿಸಿ ರಾಜ್ಯದಲ್ಲಿ ಕ್ರಿಶ್ಚಿಯನ್ ಮಿಷನರಿಗಳ ಮತಾಂತರ ಪ್ರಯತ್ನಗಳ ವಿರುದ್ಧ ಸಿಖ್ ನಾಯಕರು ತಮ್ಮ ವಿರೋಧವನ್ನು ಬಹಿರಂಗವಾಗಿಯೇ ವ್ಯಕ್ತಪಡಿಸಿದ್ದರು. ಆದ್ದರಿಂದ ಸಿಖ್ಖರೇ ಇದನ್ನು ನಡಸಿರಬಹುದೆಂದು ಶಂಕೆ ವ್ಯಕ್ತವಾಗಿದೆ.

Join Whatsapp