ಬಿಗಿಯಾಗಿ ತಬ್ಬಿಕೊಂಡು ಪಕ್ಕೆಲುಬು ಮುರಿದ ಯುವಕ: ಪರಿಹಾರಕ್ಕಾಗಿ ಕೋರ್ಟ್ ಮೊರೆಹೋದ ಯುವತಿ

Prasthutha|

ತಬ್ಬಿಕೊಂಡ ತಪ್ಪಿಗೆ 1.16 ಲಕ್ಷ ಪರಿಹಾರ ನೀಡಿದ!

- Advertisement -

ಯುಯಾಂಗ್: ಸಹೋದ್ಯೋಗಿಯೊಬ್ಬ ಬಿಗಿಯಾಗಿ ತಬ್ಬಿಕೊಂಡ ಕಾರಣದಿಂದಾಗಿ ತನ್ನ ಪಕ್ಕೆಲುಬು ಮುರಿದಿದೆ ಎಂದು ಮಹಿಳೆಯೊಬ್ಬಳು ನ್ಯಾಯಾಲಯದ ಮೊರೆ ಹೋಗಿದ್ದಾಳೆ. ಈ ಹಿನ್ನೆಲೆಯಲ್ಲಿ ತಬ್ಬಿಕೊಂಡ ಸಹೋದ್ಯೋಗಿ ಯುವಕನೊಂದಿಗೆ ಯುವತಿಗೆ ಬರೋಬ್ಬರಿ 10,000 ಯುವಾನ್ (₹ 1.16 ಲಕ್ಷ) ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.

ಇಂತಹ ವಿಲಕ್ಷಣ ಘಟನೆಯೊಂದು ಚೀನಾದ ಯುಯಾಂಗ್ ನಗರದ ಹುನಾನ್ ಪ್ರಾಂತ್ಯದಲ್ಲಿ ನಡೆದಿದೆ.

- Advertisement -

ಮಹಿಳಾ ಸಹೋದ್ಯೋಗಿಯೊಂದಿಗೆ ಮಾತನಾಡುತ್ತಿದ್ದಾಗ ಪುರುಷ ಸಹೋದ್ಯೋಗಿಯೊಬ್ಬರು ಅವಳನ್ನು ತುಂಬಾ ಬಿಗಿಯಾಗಿ ಅಪ್ಪಿಕೊಂಡು ಆ ಕಾರಣದಿಂಡಾಗಿ ಅವಳ ಎದೆಯ ಭಾಗದ ಮೂರು ಪಕ್ಕೆಲುಬು ಮುರಿದಿದೆ ಎನ್ನಲಾಗಿದೆ.

ಈ ಕಾರಣ ಯುವಕನ ವಿರುದ್ಧ ಮೊಕದ್ದಮೆ ಹೂಡಿದ ಮಹಿಳೆ ಪರಿಹಾರಕ್ಕಾಗಿ ಅಗ್ರಹಿಸಿದ್ದು, ಯುವಕ ತಬ್ಬಿಕೊಂಡ ತಪ್ಪಿಗೆ 1.16 ಲಕ್ಷ ಪರಿಹಾರ ನೀಡಿದ್ದಾನೆ.



Join Whatsapp