ತಂದೆಯ ಗೆಳೆಯರಿಂದಲೇ ಕಾಲೇಜು ವಿದ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರ: ಓರ್ವನ ಬಂಧನ

Prasthutha|

ತ್ರಿಶೂರ್: ತನ್ನ ತಂದೆಯ ಗೆಳೆಯರಿಂದಲೇ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೋರ್ವಳು ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಘಟನೆ ತ್ರಿಶೂರ್ ನಲ್ಲಿ ನಡೆದಿದೆ. ಘಟನೆ ಸಂಬಂಧ ಓರ್ವನನ್ನು ಪೊಲೀಸರು ಬಂಧಿಸಿದ್ದು, ಮತ್ತಿಬ್ಬರಿಗಾಗಿ ಶೋಧ ಕೈಗೊಳ್ಳಲಾಗಿದೆ. ಪೊನ್ನಾನಿ ನಿವಾಸಿ ಶಾಫಿ ಬಂಧಿತ ವ್ಯಕ್ತಿ.

- Advertisement -

ಎರಡು ತಿಂಗಳ ಹಿಂದೆ ವಿದ್ಯಾರ್ಥಿನಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದು, ತರಗತಿಯಲ್ಲಿ ಎಂದಿಗಿಂತಲೂ ಭಿನ್ನವಾಗಿ ಇದ್ದ ಹಿನ್ನೆಲೆಯಲ್ಲಿ ಅಧ್ಯಾಪಕರು ಆಕೆಯನ್ನು ಪ್ರಶ್ನಿಸಿದ್ದಾರೆ. ಅಲ್ಲದೆ ತಜ್ಞರ ಮೂಲಕ ಕೌನ್ಸಿಲಿಂಗ್ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ.

ಮನೆಯಲ್ಲಿ ಯಾರೂ ಇಲ್ಲದ ವೇಳೆ ಆಗಮಿಸಿದ ತಂದೆ ಗೆಳೆಯರು ಕೈಗಳನ್ನು ಕಟ್ಟಿ ಹಾಕಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಅದಕ್ಕಿಂತಲೂ ಮೊದಲು ಟ್ಯೂಶನ್ ಸೆಂಟರ್‌ನಲ್ಲಿ ಇದೇ ರೀತಿ ಸಾಮೂಹಿಕ ಅತ್ಯಾಚಾರ ಎಸಗಲಾಗಿತ್ತು ಎಂದು ವಿದ್ಯಾರ್ಥಿನಿ ಕೌನ್ಸಿಲಿಂಗ್ ವೇಳೆ ಬಹಿರಂಗಪಡಿಸಿದ್ದಾಳೆ.

- Advertisement -

ವಿದ್ಯಾರ್ಥಿನಿಯ ತಂದೆ ಮತ್ತು ತಾಯಿ ಗಾಂಜಾ ಪ್ರಕರಣದಲ್ಲಿ ಈ ಹಿಂದೆ ಬಂಧಿತರಾಗಿ ಶಿಕ್ಷೆಗೆ ಒಳಪಟ್ಟಿದ್ದರು.



Join Whatsapp