ಶಿವಮೊಗ್ಗ: ಜಬೀವುಲ್ಲಾ ಮೇಲೆ ಪೊಲೀಸ್ ಫೈರಿಂಗ್: ಪತ್ನಿ ಹೇಳಿದ್ದೇನು?!

Prasthutha|

►ಮುಖಕ್ಕೆ ಬಟ್ಟೆ ಕಟ್ಟಿ , ಕೈ ಹಿಂದೆ ಕಟ್ಟಿಹಾಕಿ ನನ್ನ ಗಂಡನ ಕಾಲಿಗೆ ಗುಂಡು ಹಾರಿಸಿದ್ದಾರೆ

- Advertisement -

ಶಿವಮೊಗ್ಗ: ಪೊಲೀಸರಿಗೆ ಹಲ್ಲೆ ಮಾಡಲು ಯತ್ನಿಸಿದ್ದರು ಎಂದು ಹೇಳಿ ಜಬೀಉಲ್ಲಾ ಮೇಲೆ ವಿನಾ ಕಾರಣ ಫೈರಿಂಗ್ ಮಾಡಲಾಗಿದೆ, ಪೊಲೀಸ್ ವರದಿ ಸುಳ್ಳು ಎಂದು ಜಬೀಉಲ್ಲಾ ಪತ್ನಿ ಹೇಳಿದ್ದಾರೆ.

ಸಾವರ್ಕರ್ ಚಿತ್ರ ತೆರವು ವಿಚಾರದ ನಂತರ ಪ್ರವೀಣ್ ಸಿಂಗ್ ಎಂಬಾತನಿಗೆ ಮನೆ ಮುಂದೆ ಚೂರಿ ಇರಿತವಾಗಿತ್ತು. ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಹಲ್ಲೆ ನಡೆಸಿ ಪರಾರಿಯಾಗಿದ್ದರು. ಈ ಪ್ರಕರಣದ ಪ್ರಮುಖ ಆರೋಪಿಯೆಂದು ಜಬೀಉಲ್ಲಾ ನನ್ನು ಬಂಧಿಸಲು ಪೊಲೀಸರು ಮನೆಗೆ ತೆರಳಿದ್ದು, ಅವರ ಕಾಲಿಗೆ ಗುಂಡು ಹಾರಿಸಿದ್ದರು ಮತ್ತು ಪೊಲೀಸರಿಗೆ ಚಾಕಿನಿಂದ ಹಲ್ಲೆ ಮಾಡಲು ಮುಂದಾದಾಗ ಫೈರಿಂಗ್ ಮಾಡಲಾಗಿದೆ ಎಂದು ವರದಿಯಲ್ಲಿ ತಿಳಿಸಿದ್ದರು.

- Advertisement -

ಆದರೆ ಜಬೀಉಲ್ಲಾ ಪತ್ನಿ ಹೇಳುವಂತೆ ಗಲಭೆ ಸಂಧರ್ಭದಲ್ಲಿ ಜಬೀಉಲ್ಲಾ ಅಲ್ಲಿ ಇದ್ದದ್ದು ಹೌದು. ನನಗೂ ಕರೆ ಮಾಡಿ ಇಲ್ಲಿ ಗಲಾಟೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಆದರೆ ರಾತ್ರಿ 9.45 ಕ್ಕೆ ಜಬೀಉಲ್ಲಾ ಊಟ ಮಾಡುತ್ತಿರುವಾಗ ಮನೆಗೆ ನುಗ್ಗಿದ ಪೊಲೀಸರು ಕೈತೊಳೆಯಲು ಬಿಡದೆ ಬಂಧಿಸಿದ್ದರು. ಯಾಕೆ ಕರೆದುಕೊಂಡು ಹೋಗುತ್ತಿದ್ದೀರಿ ಎಂದು ಕೇಳಿದಕ್ಕೆ ಕಾರಣವೇನೂ ತಿಳಿಸಿಲ್ಲ. 9.45 ಕ್ಕೆ ಬಂಧನ ಮಾಡಿದ ಪೊಲೀಸರು ವರದಿಯಲ್ಲಿ 4 ಗಂಟೆಗೆ ಅರೆಸ್ಟ್ ಮಾಡಲಾಗಿದೆ ಎನ್ನುತ್ತಿದ್ದಾರೆ.

ಮಧ್ಯರಾತ್ರಿ 2 ಗಂಟೆಗೆ ಮುಖಕ್ಕೆ ಬಟ್ಟೆ ಕಟ್ಟಿ , ಕೈ ಹಿಂದೆ ಕಟ್ಟಿಹಾಕಿ ನನ್ನ ಗಂಡನ ಕಾಲಿಗೆ ಗುಂಡು ಹಾರಿಸಿದ್ದಾರೆ. ಆದರೆ ಮಾಧ್ಯಮಗಳಲ್ಲಿ ಪೊಲೀಸರಿಗೆ ಚಾಕುವಿನಲ್ಲಿ ಹಲ್ಲೆ ಮಾಡಲು ಮುಂದಾದಾಗ ಫೈರಿಂಗ್ ಮಾಡಲಾಗಿದೆ ಎಂದು ತೋರಿಸುತ್ತಿದ್ದಾರೆ. 9.45 ಕ್ಕೆ ಮನೆಯಿಂದ ಕರೆದುಕೊಂಡು ಹೋದವರು 4 ಗಂಟೆವರೆಗೆ ಅವರೊಂದಿಗೆ ಇಟ್ಕೊಂಡಿದ್ದಾರೆ. ಆ ಸಮಯದಲ್ಲಿ ಎಲ್ಲೆಲ್ಲಾ ಕರೆದುಕೊಂಡು ಹೋಗಿದ್ದಾರೆ ನಮಗೆ ಗೊತ್ತಿಲ್ಲ. ಮನೆ, ಸಂಸಾರ ಮಾತ್ರ ನೋಡಿಕೊಂಡು ಇರುವ ಜಬೀಉಲ್ಲಾ ಯಾವ ಸಂಘಟನೆಯ ಸದಸ್ಯರಲ್ಲ. ಸುಮ್ಮನೆ ಯಾವುದೇ ಸಮಸ್ಯೆ ಆದರೆ ಯಾವ ಸಂಘಟನೆಯಲ್ಲಿದ್ದರು ಎಂದು ನಮ್ಮನ್ನು ಹೇಳಲು ಒತ್ತಾಯಿಸುತ್ತಾರೆ ಎಂದು ತಿಳಿಸಿದರು

ನನ್ನ ಪತಿಯನ್ನು ಈ ಪ್ರಕರಣದಲ್ಲಿ ಯಾಕೆ ಆರೋಪಿ ಮಾಡಿದ್ದಾರೆ ಎಂದು ನನಗೆ ಗೊತ್ತಿಲ್ಲ. ನನ್ನ ಪತಿ ಚಾಕು ಇರಿತ ಮಾಡಿದ್ದರೆ ಯಾಕೆ ಮನೆಗೆ ಬರುತ್ತಿದ್ದರು, ಅವರಿಗೆ ಎಲ್ಲಾದರೂ ನಾಪತ್ತೆಯಾಗಬಹುದಿತ್ತಲ್ಲಾ ಪೊಲೀಸರೇ ಕಾನೂನು ಕೈಗೆತ್ತಿಕೊಳ್ಳುತ್ತಿದ್ದು, ನಾಳೆ ನನ್ನ ಪತಿಗೆ ಜೀವಕ್ಕೆ ಏನಾದರೂ ಅಪಾಯವಾದರೆ ಯಾರು ಹೊಣೆ ಎಂದು ಪ್ರಶ್ನಿಸಿದ್ದಾರೆ.


ಶೂಟೌಟ್ ಬಳಿಕ ಅಪರೇಷನ್ ಮಾಡಲು ನನ್ನಿಂದ ಸಹಿ ಹಾಕಿಸಿಕೊಂಡರು. ಈಗಲೂ ಆಸ್ಪತ್ರೆಯಲ್ಲಿದ್ದಾರೆ ಆದರೆ ನೋಡಲು ಬಿಡುತ್ತಿಲ್ಲ.

ಅನಿರೀಕ್ಷಿತವಾಗಿ ಮನೆಯಿಂದ ಕರೆದುಕೊಂಡು ಹೋದ ಪೊಲೀಸರು ಮುಖಕ್ಕೆ ಬಟ್ಟೆ ಕಟ್ಟಿ , ಕೈ ಹಿಂದೆ ಕಟ್ಟಿಹಾಕಿ ಗುಂಡು ಹಾರಿಸುವ ಬದಲು ಮನೆಯಲ್ಲಿ ಫೈರಿಂಗ್ ಮಾಡಿದ್ದೀವಿ ಎನ್ನುತ್ತಿದ್ದಾರೆ. ಕಾನೂನು ಕೈಗೆತ್ತಿಕೊಂಡ ಪೊಲೀಸರ ಮೇಲೆ ಸರಕಾರ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ನೈಜ ಆರೋಪಿಗಳನ್ನು ಬಂಧಿಸಿ ನನ್ನ ಪತಿಯನ್ನು ಬಿಡುಗಡೆ ಮಾಡಬೇಕು ಎಂದು ಜಬೀಉಲ್ಲಾ ಪತ್ನಿ ಮನವಿ ಮಾಡಿದ್ದಾರೆ.

Join Whatsapp