‘ಗಣರಾಜ್ಯ ರಕ್ಷಿಸಿ ರಾಷ್ಟ್ರೀಯ ಅಭಿಯಾನ’: ಇಂದು ಜೋಕಟ್ಟೆಯಲ್ಲಿ ವಿವಿಧ ಕಾರ್ಯಕ್ರಮ
ಮಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ‘ಗಣರಾಜ್ಯ ರಕ್ಷಿಸಿ’ ಅಭಿಯಾನದ ಅಡಿಯಲ್ಲಿ ಇಂದು(ಸೋಮವಾರ) ಜೋಕಟ್ಟೆಯ ಟಿಪ್ಪು ನಗರದಲ್ಲಿ ಆಝಾದಿ ಎಕ್ಸ್ ಪೋ,ಕವಿಗೋಷ್ಠಿ, ಏರಿಯಾ ಕಾನ್ಫರೆನ್ಸ್ ಸಹಿತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಇಂದು ಮಧ್ಯಾಹ್ನ 3ಗಂಟೆಯಿಂದ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣಾರ್ಥ ಆಝಾದಿ ಎಕ್ಸ್ ಪೋ ನಡೆಯಲಿದೆ.
ಸಂಜೆ 7.30ಕ್ಕೆ ಸರಿಯಾಗಿ ಬಹುಭಾಷಾ ಕವಿಗೋಷ್ಠಿ ಆಯೋಜಿಸಲಾಗಿದೆ.
ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಅಥಾವುಲ್ಲಾ ಜೋಕಟ್ಟೆ ವಹಿಸಲಿದ್ದು, ನಿರೂಪಣೆಯನ್ನು ಶೆರೀಫ್ ನಿರ್ಮುಂಜೆ ನೆರವೇರಿಸಿಕೊಡಲಿದ್ದಾರೆ. ಕವಿಗೋಷ್ಠಿಯಲ್ಲಿ ಹುಸೈನ್ ಕಾಟಿಪಳ್ಳ, ಮುಅದ್ ಕಲ್ಲಡ್ಕ, ಲುಕ್ಮಾನ್ ಅಡ್ಯಾರ್, ಸಮದ್ ಕಾಟಿಪಳ್ಳ, ಶಾಮಿಲ್ ಜೋಕಟ್ಟೆ ಕವನ ವಾಚಿಸಲಿದ್ದಾರೆ.
ನಂತರ ನಡೆಯಲಿರುವ ಏರಿಯಾ ಕಾನ್ಫರೆನ್ಸ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೋಕಟ್ಟೆ ಏರಿಯಾ ಪಿಎಫ್ ಐ ಅಧ್ಯಕ್ಷ ಇಮ್ತಿಯಾಝ್ ಜೋಕಟ್ಟೆ ವಹಿಸಲಿದ್ದಾರೆ. ಪ್ರಾಸ್ತಾವಿಕ ಭಾಷಣವನ್ನು ಜೋಕಟ್ಟೆ ಪಿಎಫ್ ಐ ಸದಸ್ಯ ರಫೀಕ್ ಬಿ.ಎಮ್ ನೇರವೇರಿಸಲಿದ್ದು, ಸಂದೇಶ ಭಾಷಣವನ್ನು ಪಿಎಫ್ ಐ ದ.ಕ. ಜಿಲ್ಲಾ ಸಮಿತಿ ಸದಸ್ಯ ಇಮ್ತಿಯಾಝ್ ತುಂಬೆ ನೆರವೇರಿಸಲಿದ್ದಾರೆ.
ಜೋಕಟ್ಟೆ ಹಳೆ ಜುಮ್ಮಾ ಮಸೀದಿ ಅಧ್ಯಕ್ಷ ಹನೀಫ್ ಎಂ.ಎಂ, ಹೊಸ ಜುಮ್ಮಾ ಮಸೀದಿ ಅಧ್ಯಕ್ಷ ಸುಲೈಮಾನ್ ಬೊಟ್ಟು ಸೇರಿದಂತೆ ವಿವಿಧ ಗಣ್ಯರು ಭಾಗವಹಿಸಲಿದ್ದಾರೆ.
ಅಲ್ಲದೆ, ಕಳೆದ ಎರಡು ದಿನಗಳಲ್ಲಿ ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ ಹಾಗೂ ಊರಿನ ಯುವಕರಿಗೆ ನಡೆಸಿದ ಹಲವಾರು ಸ್ಪರ್ಧಾಕೂಟಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ಕೂಡ ಇದೇ ವೇಳೆ ನಡೆಯಲಿದೆ ಎಂದು ಪಿಎಫ್ಐ ಏರಿಯಾ ಕಾರ್ಯದರ್ಶಿ ಝುಬೈರ್ ಜೋಕಟ್ಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.