ಚಿಕ್ಕಮಗಳೂರು: ಗ್ರಾಮಗಳಲ್ಲಿ ಕಾಡಾನೆಗಳ ದಂಡು; ಅಪಾರ ಪ್ರಮಾಣದ ಕೃಷಿ, ಬೆಳೆ ನಾಶ

Prasthutha|

ಮೂಡಿಗೆರೆ: ಮಳೆಯ ಜೊತೆಯಲ್ಲಿ ಇದೀಗ  ಗ್ರಾಮಗಳಲ್ಲಿ ಕಾಡಾನೆಗಳು  ಬೀಡು ಬಿಟ್ಟಿವೆ. 13 ಕಾಡಾನೆಗಳು ನಾಡಿನತ್ತ ಲಗ್ಗೆ ಇಟ್ಟಿದ್ದು ಕಾಫಿ ತೋಟ, ಗ್ರಾಮಗಳಲ್ಲಿ ರಾಜಾರೋಷವಾಗಿ ಓಡಾಡುತ್ತಿವೆ. ಗ್ರಾಮಸ್ಥರು ಆತಂಕದಲ್ಲಿ ಜೀವಿಸುವಂತಾಗಿದೆ.

- Advertisement -

ಮೂಡಿಗೆರೆ ತಾಲೂಕಿನ ಹಾಂದಿ, ದೇವರು ಮನೆ, ಕೋಗಿಲೆ, ವಿಜಯನಗರ, ಹೊಸಪೇಟೆ ಸುತ್ತಮುತ್ತ ಆನೆಗಳ ಸಂಚಾರ ಅತಿಯಾಗಿದ್ದು, ಕಾಡಾನೆಗಳ ದಂಡು ಅಪಾರ ಪ್ರಮಾಣದ ಕೃಷಿ, ಬೆಳೆ ನಾಶ ಮಾಡುತ್ತಿವೆ.

ಕಾಡಾನೆ ದಾಳಿ ಮಿತಿ ಮೀರುತ್ತಿದ್ದರೂ ಕ್ರಮಕೈಗೊಳ್ಳದ ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರು  ಆಕ್ರೋಶಗೊಂಡಿದ್ದಾರೆ.



Join Whatsapp