ಕನ್ನಡ ಸಾಹಿತ್ಯ ಪರಿಷತ್ತಿನ ಅಲ್ಪಸಂಖ್ಯಾತರ ಪ್ರತಿನಿಧಿಯಾಗಿ ಸರ್ದಾರ್ ಬಲ್ಜಿತ್ ಸಿಂಗ್ ನೇಮಕ

Prasthutha|

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ 107 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ನೂತನ ನಿರ್ಣಯವನ್ನು ಮಾಡಿದ್ದು,  ಪಂಜಾಬ್  ಮೂಲದ ಸರ್ದಾರ್  ಬಲ್ಜಿತ್ ಸಿಂಗ್  ರನ್ನು ಸಿಖ್ ಸಮುದಾಯದ ಅಲ್ಪಸಂಖ್ಯಾತರ ಪ್ರತಿನಿಧಿʼಯಾಗಿ ನೇಮಕ ಮಾಡಿದೆ.

- Advertisement -

ಸರ್ದಾರ್ ಬಲ್ಜಿತ್ ಸಿಂಗ್ ಮೂಲತಃ ಪಂಜಾಬಿನವರು ಮತ್ತು ಹುಟ್ಟಿದ್ದು ಬೆಂಗಳೂರಿನಲ್ಲಿ.  ಕನ್ನಡ ಭಾಷೆಯ ಕುರಿತು ಅಪಾರ ಗೌರವವನ್ನು ಹೊಂದಿರುವ ಸಿಂಗ್, ಕನ್ನಡ ಕಲಿತು ನಿರರ್ಗಳವಾಗಿ ಮಾತಾಡುವುದು, ಬರೆಯುವುಷಷಷಷಷನ್ನು ರೂಢಿಸಿಕೊಂಡಿದ್ದಾರೆ. ಜೊತೆಗೆ ಕನ್ನಡಿಗರ ಹೆಮ್ಮೆಯ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವವನ್ನು ಪಡೆದುಕೊಂಡಿದ್ದಾರೆ.

ಸಿಂಗ್ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಸಿಖ್ ಸಮುದಾಯದ ಅಲ್ಪಸಂಖ್ಯಾತರ ಪ್ರತಿನಿಧಿ ಯಾಗಿ ಕಾರ್ಯನಿರ್ವಹಿಸಲು  ಸಂತೋಷದಿಂದ ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಅವರಿಗೆ ಮಹತ್ವದ ಜವಾಬ್ದಾರಿಯನ್ನು ನೀಡಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.



Join Whatsapp