ಇಂದಿನ ಹತ್ಯೆಗಳಿಗೆ ಕಾಂಗ್ರೆಸ್ ಕಾರಣ: ಸಚಿವ ಕೋಟಾ

Prasthutha|

- Advertisement -

ಕಾರವಾರ: ಕಾಂಗ್ರೆಸ್ ಸರ್ಕಾರ ಇದ್ದಾಗ 23 ಕಾರ್ಯಕರ್ತರ ಹತ್ಯೆಯಾಗಿತ್ತು. ಆದರೆ ಆ ಸಂದರ್ಭದಲ್ಲಿ ಆರೋಪಿಗಳನ್ನು ಬಂಧಿಸದೇ ಬಿಟ್ಟಿರುವುದರಿಂದಲೇ ಇಂತಹ ಅನಾಹುತಗಳು ಮುಂದುವರೆಯುತ್ತಿವೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಇದ್ದಾಗ 23 ಕಾರ್ಯಕರ್ತರ ಹತ್ಯೆಯಾಗಿತ್ತು. ಆ ಸಂದರ್ಭದಲ್ಲಿ ಕೆಲ ಆರೋಪಿಗಳನ್ನು ಬಂಧಿಸದೇ ಬಿಟ್ಟಿದ್ದರಿಂದಲೇ ಇಂತಹ ಅನಾಹುತಗಳು ಮುಂದುವರೆಯುತ್ತಿವೆ. ಸಿಬಿಐಗೆ ಕೊಟ್ಟಿರುವ ಪ್ರಕರಣಗಳು ವಿಳಂಬವಾಗಿದೆ. ಇದನ್ನು ಹೊರತುಪಡಿಸಿದರೆ ಹತ್ಯೆ ಮಾಡಿದ ಎಲ್ಲ ಆರೋಪಿಗಳನ್ನು ನಮ್ಮ ಸರ್ಕಾರ ಬಂಧನ ಮಾಡಿ ಜೈಲಿಗಟ್ಟಿದೆ ಎಂದರು.

Join Whatsapp