ಮುಂಬೈ : ಮನಿ ಲಾಂಡರಿಂಗ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು 9 ಗಂಟೆಗಳ ಕಾಲ ನಡೆಸಿದ ದಾಳಿಯ ನಂತರ ಶಿವಸೇನೆಯ ಉನ್ನತ ನಾಯಕ ಮತ್ತು ರಾಜ್ಯಸಭಾ ಸಂಸದ ಸಂಜಯ್ ರಾವತ್ ಅವರನ್ನು ಭಾನುವಾರ ತಡರಾತ್ರಿ ಬಂಧಿಸಲಾಗಿದೆ.
ಕೇಂದ್ರ ತನಿಖಾ ಸಂಸ್ಥೆ ಸಮನ್ಸ್ ಜಾರಿಗೊಳಿಸಿಯೂ ರಾವತ್ ಗೈರು ಹಾಜರಿಯ ನಂತರ ಈ ದಾಳಿ ನಡೆಸಿದ್ದು, 60 ವರ್ಷದ ರಾವತ್ ಅವರನ್ನು ಇಡಿ ನಿನ್ನೆ ಬಂಧಿಸಿದ್ದು, ಇಂದು ವಿಶೇಷ ಪಿಎಂಎಲ್ಎ (ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ) ನ್ಯಾಯಾಲಯದಲ್ಲಿ ಹಾಜರುಪಡಿಸಲಿದೆ.
ಕೇಂದ್ರ ತನಿಖಾ ಸಂಸ್ಥೆಗಳನ್ನು ಬಿಜೆಪಿ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪದ ಬೆನ್ನಲ್ಲೇ ರಾವುತ್ ಬಂಧನವಾಗಿದ್ದು, ಈ ಬಂಧನವು ವಿರೋಧ ಪಕ್ಷಗಳಿಂದ ಬಲವಾದ ಪ್ರತಿಕ್ರಿಯೆಗಳನ್ನು ಪ್ರಚೋದಿಸುವ ಸಾಧ್ಯತೆಯಿದೆ,