ಮಣಿಪಾಲ್ ಮೀಡಿಯಾ ನೆಟ್ವರ್ಕ್ ನ ಅಧ್ಯಕ್ಷ ಟಿ.ಮೋಹನದಾಸ್ ಎಂ.ಪೈ ನಿಧನ

Prasthutha|

ಉಡುಪಿ: ಡಾ.ಟಿ.ಎಂ.ಎ.ಪೈ ಫೌಂಡೇಶನ್ ಮತ್ತು ಉದಯವಾಣಿ ಪತ್ರಿಕೆಯ ವ್ಯವಸ್ಥಾಪಕ, ಮಣಿಪಾಲ್ ಮೀಡಿಯಾ ನೆಟ್ವರ್ಕ್ ನ ಅಧ್ಯಕ್ಷ ಟಿ.ಮೋಹನದಾಸ್ ಎಂ.ಪೈ ಅವರು ದೀರ್ಘಕಾಲದ ಅನಾರೋಗ್ಯದಿಂದ ಭಾನುವಾರ ಕೆಎಂಸಿ ಆಸ್ಪತ್ರೆಯಲ್ಲಿ ನಿನ್ನೆ ತಡರಾತ್ರಿ ನಿಧನರಾದರು.

- Advertisement -

ಕಾನೂನು ಪದವೀಧರರಾದ ಮೋಹನದಾಸ್ ಪೈ , ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮಾಡರ್ನ್ ಶಾಲೆಯಲ್ಲಿ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಉಡುಪಿ ಬೋರ್ಡ್ ಶಾಲೆಯಲ್ಲಿ ಪಡೆದರು. ನಂತರ ತಮ್ಮ ತಂದೆಯ ಎಂಜಿಎಂ ಕಾಲೇಜಿನಲ್ಲಿ ಇಂಟರ್ ಮೀಡಿಯೇಟ್ ಶಿಕ್ಷಣವನ್ನು ಮಾಡಿದರು. ಬಳಿಕ ತಮ್ಮ ಕಾನೂನು ಅಧ್ಯಯನಕ್ಕಾಗಿ ಕೊಲ್ಹಾಪುರಕ್ಕೆ ತೆರಳಿದರು.

ಮೋಹನದಾಸ ಪೈಯವರು ತಮ್ಮ ಅಧ್ಯಯನದ ನಂತರ, ತಮ್ಮ ತಂದೆ ಸ್ಥಾಪಿಸಿದ ಸಂಸ್ಥೆಗಳ ಕೆಲಸಗಳಲ್ಲಿ ಸಕ್ರಿಯರಾಗಲು ಮಣಿಪಾಲಕ್ಕೆ ಮರಳಿದರು. ಮಣಿಪಾಲ್ ಪ್ರೆಸ್ ನ ಆಧುನೀಕರಣಕ್ಕೆ ಮತ್ತು ಅದನ್ನು ರಾಷ್ಟ್ರಮಟ್ಟದಲ್ಲಿ ಮೆಚ್ಚುಗೆ ಪಡೆದ ಮುದ್ರಣ ಸಂಸ್ಥೆಯನ್ನಾಗಿ ಮಾಡಲು ಅವರು ಹೆಚ್ಚಿನ ಕೊಡುಗೆ ನೀಡುವುದರ ಜೊತೆಗೆ, ಉದಯವಾಣಿ ಪತ್ರಿಕೆಯ ಬೆಳವಣಿಗೆಗೆ ದೊಡ್ಡ ಮಟ್ಟದ ಕೊಡುಗೆ ನೀಡಿದ್ದಾರೆ.

- Advertisement -

89 ವರ್ಷದ ಪೈ ಅವರು ತಮ್ಮ ಸಹೋದರರಾದ ಟಿ.ರಾಮದಾಸ್ ಪೈ, ಟಿ.ನಾರಾಯಣ ಪೈ, ಟಿ.ಅಶೋಕ್ ಪೈ ಮತ್ತು ಸಹೋದರಿಯರಾದ ಆರ್.ವಸಂತಿ, ಜಯಂತಿ ಪೈ, ಇಂದುಮತಿ ಪೈ ಮತ್ತು ಆಶಾ ಪೈ ಅವರನ್ನು ಅಗಲಿದ್ದಾರೆ.

Join Whatsapp