ಡಿನೋಟಿಫಿಕೆಷನ್ ಪ್ರಕರಣ: ಹೆಚ್ ಡಿ ಕುಮಾರಸ್ವಾಮಿಗೆ ಲೋಕಾಯುಕ್ತ ಬುಲಾವ್

Prasthutha|

ಬೆಂಗಳೂರು: ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಗಂಗೇನಹಳ್ಳಿ ಡಿನೋಟಿಫಿಕೆಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರಿಂದ ನೋಟಿಸ್ ಜಾರಿ ಹಿನ್ನೆಲೆ ಇಂದು ಸಂಜೆ ಹೆಚ್ ಡಿ ಕುಮಾರಸ್ವಾಮಿ ವಿಚಾರಣೆಗೆ ಹಾಜರಾಗಲಿದ್ದಾರೆ.

- Advertisement -


ಸಂಜೆಯೊಳಗೆ ಹಾಜರಾಗುವುದಾಗಿ ತಿಳಿಸಿದ್ದು, ಏರ್ ಪೋರ್ಟ್ ನಿಂದ ನೇರವಾಗಿ ಲೋಕಾ ಕಚೇರಿಗೆ ಆಗಮಿಸಲಿದ್ದಾರೆ.


ಸೋಮವಾರ ವಿಚಾರಣೆಗೆ ಹಾಜರಾಗುವಂತೆ ಹೆಚ್ಡಿ ಕುಮಾರಸ್ವಾಮಿಗೆ ಲೋಕಾಯುಕ್ತ ಪೊಲೀಸರಿಂದ ನೋಟಿಸ್ ನೀಡಲಾಗಿತ್ತು. ಆದರೆ ಸೋಮವಾರ ಬೇರೆ ಕೆಲಸವಿರುವುದರಿಂದ ಇಂದೇ ವಿಚಾರಣೆಗೆ ಬರುವುದಾಗಿ ತಿಳಿಸಿದ್ದರು. ಹಾಗಾಗಿ ಬೆಂಗಳೂರು ಏರ್ ಪೋರ್ಟ್ ನಿಂದ ಹೊರಟು ಯಲಹಂಕ ಬಳಿ ಬರುತ್ತಿರುವ ಕುಮಾರಸ್ವಾಮಿ ಡಿವೈಎಸ್ ಪಿ ಬಸವರಾಜ್ ಮುಗುದಂ ಮುಂದೆ ವಿಚಾರಣೆಗೆ ಹಾಜರಾಗಲಿದ್ದಾರೆ.

- Advertisement -

ಈಗಾಗಲೇ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸತತ 3 ಘಂಟೆಗಳ ಕಾಲ ವಿಚಾರಣೆ ಎದುರಿಸಿದ್ದಾರೆ.



Join Whatsapp