ಮಂಗಳೂರು: ಸುಳ್ಯ ತಾಲೂಕಿನ ಕಳಂಜದಲ್ಲಿ ಸಂಘಪರಿವಾರದ ಗೂಂಡಾಗಳಿಂದ ಹತ್ಯೆಗೊಳಗಾದ ಶಹೀದ್ ಮಸೂದ್ ಕುಟುಂಬಸ್ಥರು ಇಂದು ದ.ಕ ಜಿಲ್ಲಾಧಿಕಾರಿಯನ್ನು ಮತ್ತು ಪೊಲೀಸ್ ಅಧೀಕ್ಷಕರನ್ನು ಭೇಟಿಯಾಗಿ ನ್ಯಾಯಕ್ಕಾಗಿ ಆಗ್ರಹಿಸಿ,ಕೊಲೆಗಡುಕರಿಗೆ ಕಠಿಣ ಶಿಕ್ಷೆಗೆ ಗುರಿಪಡಿಸುವಂತೆ ಆಗ್ರಹಿಸಿದರು.
ಸರ್ಕಾರದಿಂದ 25 ಲಕ್ಷ ರೂಪಾಯಿ ಪರಿಹಾರ ಧನ ಕೊಡಲು ಶಿಫಾರಸು ಮಾಡುವಂತೆಯೂ ಇದೇ ಸಂದರ್ಭದಲ್ಲಿ ಆಗ್ರಹಿಸಿದರು.
ನಿಯೋಗದಲ್ಲಿ ಮಸೂದ್ನ ತಾಯಿ ಸಾರಮ್ಮ ,ಸಹೋದರ ಇರ್ಶಾದ್ , ಮಿರ್ಶಾದ್, ಸಹೋದರಿ ಶಿಫಾನ, ಮಾವಂದಿರಾದ ಶೌಕತ್ ಕಳಂಜ,ಹೈದರ್ ಕಳಂಜ ಹಾಗೂ ಸ್ಥಳೀಯರಾದ ಫೈಝಲ್ ಬೆಳ್ಳಾರೆ, ಹಮೀದ್ ಮರಕ್ಕಡ ಉಪಸ್ಥಿತರಿದ್ದರು