ಕೊಲಂಬೊ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಲೀಟರ್ಗೆ 20 ರೂ.ಗಳಷ್ಟು ಕಡಿತಗೊಳಿಸಿ ಶ್ರೀಲಂಕಾದ ಸರ್ಕಾರಿ ಸ್ವಾಮ್ಯದ ಸಿಲೋನ್ ಪೆಟ್ರೋಲಿಯಂ ಕಾರ್ಪೊರೇಶನ್ ಆದೇಶ ಹೊರಡಿಸಿದ್ದು, ಭಾನುವಾರ ರಾತ್ರಿ 10 ಗಂಟೆಯಿಂದಲೇ ನೂತನ ದರ ಜಾರಿಗೆ ಬಂದಿದೆ.
ಆರ್ಥಿಕ ಸಂಕಷ್ಟ ಮತ್ತು ಅಸ್ಥಿರ ಸರ್ಕಾರದ ಸಮಸ್ಯೆಗೆ ಸಿಲುಕಿರುವ ಶ್ರೀಲಂಕಾದಲ್ಲಿ ಫೆಬ್ರವರಿಯ ನಂತರ ಐದು ಬಾರಿ ಪೆಟ್ರೋಲ್–ಡೀಸೆಲ್ ಬೆಲೆ ಏರಿಕೆ ಮಾಡಲಾಗಿತ್ತು.
ತೈಲ ಖರೀದಿಗೆ ಪೆಟ್ರೋಲ್ ಬಂಕ್ ಮುಂದೆ ಸರತಿ ಸಾಲಿನಲ್ಲಿ ನಿಲ್ಲುವುದು ಬೇಡ, ಎಲ್ಲರಿಗೂ ಇಂಧನ ಸರಬರಾಜು ಮಾಡಲು ವ್ಯವಸ್ಥೆ ಕೈಗೊಳ್ಳುತ್ತೇವೆ ಎಂದು ಸಿಲೋನ್ ಪೆಟ್ರೋಲಿಯಂ ಕಾರ್ಪೊರೇಶನ್ ಹೇಳಿದೆ.