4 ತಿಂಗಳ ಹಸುಗೂಸನ್ನು ಕಟ್ಟಡದಿಂದ ಹೊರಕ್ಕೆ ಎಸೆದ ಕೋತಿ; ಮಗು ಸ್ಥಳದಲ್ಲೇ ಸಾವು

Prasthutha|

ಬರೇಲಿ: ನಾಲ್ಕು ತಿಂಗಳ ಹಸುಗೂಸನ್ನು ಮೂರು ಅಂತಸ್ತಿನ ಮನೆಯ ಮೇಲ್ಛಾವಣಿಯಿಂದ ಕೋತಿಯೊಂದು ಎಸೆದಿದ್ದು ಮಗು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬರೇಲಿಯ ಗ್ರಾಮೀಣ ಪ್ರದೇಶದಲ್ಲಿ ನಡೆದಿದೆ.

- Advertisement -

ಘಟನೆ ಕುರಿತು ವರದಿಯಾಗಿದ್ದು, ತನಿಖೆ ನಡೆಸಲು ಅರಣ್ಯ ಇಲಾಖೆಯ ತಂಡವನ್ನು ಕಳುಹಿಸಲಾಗಿದೆ ಎಂದು ಬರೇಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಲಲಿತ್ ವರ್ಮಾ ತಿಳಿಸಿದ್ದಾರೆ.

ಬರೇಲಿಯ ಡುಂಕಾ ಗ್ರಾಮದ ನಿವಾಸಿ ನಿರ್ದೇಶ್ ಉಪಾಧ್ಯಾಯ (25) ಅವರು ಶುಕ್ರವಾರ ಸಂಜೆ ತಮ್ಮ ನಾಲ್ಕು ತಿಂಗಳ ಮಗುವಿನೊಂದಿಗೆ ತಮ್ಮ ಮೂರು ಅಂತಸ್ತಿನ ಮನೆಯ ಟೆರೇಸ್ ಮೇಲೆ ಪತ್ನಿಯೊಂದಿಗೆ ನಡೆದುಕೊಂಡು ಹೋಗುತ್ತಿದ್ದರು. ಇದ್ದಕ್ಕಿದ್ದಂತೆ ಕೋತಿಗಳ ಹಿಂಡು ಛಾವಣಿಯ ಮೇಲೆ ಬಂದಿವೆ. ದಂಪತಿ ಕೋತಿಗಳನ್ನು ಓಡಿಸಲು ಪ್ರಯತ್ನಿಸಿದ್ದಾರೆ. ಆದರೆ ಅದು ಸಾಧ್ಯವಾಗಲಿಲ್ಲ. ಈ ವೇಳೆ ನಿರ್ದೇಶ್ ಮೆಟ್ಟಿಲುಗಳ ಕಡೆಗೆ ಓಡಲು ಪ್ರಯತ್ನಿಸಿದಾಗ, ಮಗು ಅವರ ಕೈಯಿಂದ ಕೆಳಗೆ ಜಾರಿ ಬಿದ್ದಿದೆ. ನಿರ್ದೇಶ್ ಮಗುವನ್ನು ಹಿಡಿಯುವ ಮೊದಲು, ಕೋತಿಯು ನವಜಾತ ಶಿಶುವನ್ನು ಹಿಡಿದು ಛಾವಣಿಯಿಂದ ಎಸೆದಿದ್ದರಿಂದ  ಮಗು ಸ್ಥಳದಲ್ಲೇ ಬಿದ್ದು ಮೃತಪಟ್ಟಿದೆ ಎಂದು ತಿಳಿದುಬಂದಿದೆ.

Join Whatsapp