ಶಾಲಾ ಪ್ರವಾಸಕ್ಕೂ ಸಂಘಪರಿವಾರ ಕೊಂಕು

Prasthutha|

ಚಾಮರಾಜನಗರ: ಯುಕೆಜಿ ಮಕ್ಕಳನ್ನು ದರ್ಗಾ ಮತ್ತು ಮಸೀದಿಗೆ ಪ್ರವಾಸಕ್ಕೆ ಕರೆದೊಯ್ದಕ್ಕೆ ಸಂಘಪರಿವಾರ ಮತ್ತು ಇತರ ಹಿಂದುತ್ವ ಸಂಘಟನೆಗಳು ಶಾಲಾ ಶಿಕ್ಷಕರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ನಡೆದಿದೆ.

- Advertisement -

‘ಯಂಗ್ ಸ್ಕಾಲರ್’ ಶಾಲೆಯ ಶಿಕ್ಷಕರು ಜುಲೈ 8 ರಂದು ಯುಕೆಜಿ ವಿದ್ಯಾರ್ಥಿಗಳನ್ನು ತೆರಕಣಾಂಬಿ ಪಟ್ಟಣದ ದರ್ಗಾ ಮತ್ತು ಮಸೀದಿಗೆ ಪ್ರವಾಸಕ್ಕೆ ಕರೆದೊಯ್ದಿದ್ದರು. ಈ ಕಾರಣಕ್ಕೆ ಶಾಲಾ ಆಡಳಿತದ  ವಿರುದ್ಧ ಸಂಘಪರಿವಾರ ಅಸಮಾಧಾನ ವ್ಯಕ್ತಪಡಿಸಿದೆ.

ಸಂಘಪರಿವಾರದ ಒತ್ತಡಕ್ಕೆ ಮಣಿದು ಶಾಲಾ ಆಡಳಿತ ಮಂಡಳಿಯು ಕ್ಷಮೆಯಾಚಿಸಿ, ಸಂಬಂಧಪಟ್ಟ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದೆ.

- Advertisement -

‘ಶಿಕ್ಷಕರು ಈ ಪ್ರವಾಸದ ಬಗ್ಗೆ ಸಂಬಂಧಪಟ್ಟ ಪೋಷಕರಿಗೆ ತಿಳಿಸಿದ್ದರು’ ಎಂದು ಶಿಕ್ಷಣ ಇಲಾಖೆಯು ಘಟನೆಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ್ದು, ಈ ಕುರಿತು ಹೆಚ್ಚಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದೆ. ಈ ಪ್ರವಾಸವು ಕೋಮುವಾದದ ತಿರುವು ಪಡೆದುಕೊಂಡಿದ್ದು, ಸೌಹಾರ್ದ ಮೆರೆದ ಶಿಕ್ಷಕರ ವಿರುದ್ಧ ಈ ರೀತಿಯ ಆಕ್ರೋಶವು ಸಮಂಜಸವಲ್ಲ ಎಂದು ಸ್ಥಳೀಯರು ಅಭಿಪ್ರಾಯ ಪಟ್ಟಿದ್ದಾರೆ ಎನ್ನಲಾಗಿದೆ.



Join Whatsapp