ಸುಟ್ಟು ಕರಕಲಾದ ಕಾರು; ಅರೆಬೆಂದ ಸ್ಥಿತಿಯಲ್ಲಿ ಶವ ಪತ್ತೆ !

Prasthutha|

ಉಡುಪಿ: ಕಾರಿನ ಜೊತೆಗೆ ವ್ಯಕ್ತಿಯೊಬ್ಬ ಸುಟ್ಟು ಕರಕಲಾಗಿ  ಶವವಾಗಿ ಪತ್ತೆಯಾಗಿರುವ ಘಟನೆ  ಉಡುಪಿಯ ಬೈಂದೂರು ಸಮೀಪದ ಹೇನ್ ಬೇರು ಎಂಬಲ್ಲಿನ  ನಿರ್ಜನ ಪ್ರದೇಶದಲ್ಲಿ ನಡೆದಿದೆ.

- Advertisement -

ಕಾರಿನ ಹಿಂಬದಿ‌ ಸೀಟ್ ನಲ್ಲಿ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದು , ಕಾರು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.‌ ವ್ಯಕ್ತಿಯ ಶವ ಪುರುಷನದ್ದೋ ಅಥವಾ ಮಹಿಳೆಯದ್ದೋ ಎಂದು ಕಂಡು ಹಿಡಿಯಲಾಗದಷ್ಟು ಸುಟ್ಟಿದೆ.

ಈ ಬಗ್ಗೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆಯ ಬಳಿಕವಷ್ಟೇ ಕೊಲೆಯೋ ಆತ್ಮಹತ್ಯೆಯೋ ಎಂಬ ನಿಖರ ಮಾಹಿತಿ ಹೊರ ಬರಬೇಕಿದೆ. ಸದ್ಯ ಮೃತ ವ್ಯಕ್ತಿಯ ಗುರುತು ಪತ್ತೆ ಹಚ್ಚುವ ಜೊತೆಗೆ ಪ್ರಕರಣ ಭೇದಿಸಲು ಪೊಲೀಸರು ಮುಂದಾಗಿದ್ದಾರೆ.



Join Whatsapp