ಉಮ್ರಾ: ದುಲ್ ಹಜ್ಜ್ 20 ರ ಬಳಿಕ ಪುನರಾರಂಭ

Prasthutha|

ಮಕ್ಕಾ:  ಈ ವರ್ಷದ ಹಜ್ ತೀರ್ಥ ಯಾತ್ರೆ ಕೊನೆಗೊಂಡಿದ್ದರೂ, ದುಲ್ ಹಜ್ಜ್ 20 ನೇ ತಾರೀಕಿನ ನಂತರವಷ್ಟೇ ಉಮ್ರಾ ಪುನರಾರಂಭಗೊಳ್ಳಲಿದೆ ಎಂದು ಹಜ್ ಮತ್ತು ಉಮ್ರಾ ಸಚಿವಾಲಯ ತಿಳಿಸಿದೆ.

- Advertisement -

ದುಲ್ ಹಜ್ಜ್ 20 ರವರೆಗೆ ಉಮ್ರಾ ಮಾಡಲು ಹಾಜಿಗಳಿಗೆ ಮಾತ್ರ ಅವಕಾಶ ನೀಡಲಾಗುವುದು .ವಿದೇಶಗಳಿಂದ ಬಂದಿರುವ ಹಾಜಿಗಳ ಸುರಕ್ಷತೆ ಮತ್ತು ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.

ಹಜ್ ಮತ್ತು ಉಮ್ರಾ ಸಚಿವಾಲಯಕ್ಕೆ ಸಂಬಂಧಿಸಿದ ಎರಡು ಹರಂ (ಮಕ್ಕಾ- ಮದೀನಾ) ವ್ಯವಹಾರಗಳ ಸಚಿವಾಲಯವು ಮುಂದಿನ ಹಿಜ್ರಾ ವರ್ಷದ ಉಮ್ರಾ ಮತ್ತು ಹಜ್ ಯೋಜನೆಗಳನ್ನು ಪ್ರಾರಂಭಿಸಿದೆ.



Join Whatsapp