ರಷ್ಯಾ: ಯುದ್ಧ ವಿರೋಧಿಸಿದ ಜನಪ್ರತಿನಿಧಿಗೆ 7 ವರ್ಷ ಜೈಲು !

Prasthutha|

ಉಕ್ರೇನ್‌ ಮೇಲಿನ ಆಕ್ರಮಣವನ್ನು ವಿರೋಧಿಸಿದ್ದ ನಗರಸಭೆಯ ವಿರೋಧ ಪಕ್ಷದ ಸದಸ್ಯನಿಗೆ ಮಾಸ್ಕೋದ ನ್ಯಾಯಾಲಯವು 7 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ʻ ಸುಳ್ಳು ಮಾಹಿತಿʼಯನ್ನು ಹರಡಿದ ಆರೋಪವನ್ನು ಮಾಸ್ಕೋ ನಗರಸಭಾ ಸದಸ್ಯ 60 ವರ್ಷದ ಅಲೆಕ್ಸಿ ಗೊರಿನೊವ್ ಮೇಲೆ ಹೊರಿಸಲಾಗಿತ್ತು.

- Advertisement -

ಉಕ್ರೇನ್‌ನಲ್ಲಿ ರಷ್ಯಾದ ಮಿಲಿಟರಿ ಕಾರ್ಯಾಚರಣೆಯನ್ನು ಟೀಕಿಸಿದ್ದಕ್ಕಾಗಿ ಜೈಲು ಶಿಕ್ಷೆಗೆ ಗುರಿಯಾದ ವಿರೋಧ ಪಕ್ಷದ ಮೊದಲ ಚುನಾಯಿತ ಸದಸ್ಯ ಗೋರಿನೋವ್ ಆಗಿದ್ದಾರೆ.

ʻನಿಮಗೆ ಇನ್ನೂ ಈ ಯುದ್ಧ ಬೇಕೇ?ʼ ಎಂಬ ಪೋಸ್ಟರ್‌ ಹಿಡಿದು ನ್ಯಾಯಾಲಯಕ್ಕೆ ಆಗಮಿಸುವ ಮೂಲಕ ಅಲೆಕ್ಸಿ ಗೊರಿನೊವ್, ಯುದ್ಧ ವಿರೋಧಿ ನಿಲುವನ್ನು ಮತ್ತಷ್ಟು ಸಮರ್ಥಿಸಿಕೊಂಡರು. ಆದರೆ ಪೋಸ್ಟರ್‌ ನ್ಯಾಯಾಧೀಶರಿಗೆ ಕಾಣದ ರೀತಿಯಲ್ಲಿ ಪೊಲೀಸರು ಅಡ್ಡ ನಿಂತಿದ್ದರು.

- Advertisement -

ನ್ಯಾಯಾಧೀಶರು ತೀರ್ಪನ್ನು ಓದುವ ವೇಳೆ ನ್ಯಾಯಾಲಯದಲ್ಲಿದ್ದ ಗೊರಿನೊವ್ ಪತ್ನಿ ಕಣ್ಣೀರಿಟ್ಟರು. ಆದರೆ ಇತರ ಬೆಂಬಲಿಗರು ಎದ್ದುನಿಂತು ಚಪ್ಫಾಳೆ ತಟ್ಟುವ ಮೂಲಕ ಗೊರಿನೊವ್‌ರನ್ನು ಬೆಂಬಲಿಸಿದರು.



Join Whatsapp